ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Monday, 5 September 2011

ನಮ್ಮಲ್ಲಿನ ಅಂತರ್ಗತ ಶಕ್ತಿಗಳು

ನಮ್ಮಲ್ಲಿ ಎಲ್ಲರೂ ನಾಯಕರಲ್ಲ. ಆದರೆ ಎಲ್ಲರಲ್ಲಿಯೂ ನಾಯಕರಾಗುವ, ಎಲ್ಲದರಲ್ಲಿಯೂ ಗೆಲುವು ಸಾಧಿಸಬೇಕೆನ್ನುವ ಅಧಮ್ಯ ಆಸೆ ಆಕಾಂಕ್ಷೆಗಳಿರುತ್ತವೆ. ಹಾಗಾದರೆ ಕೆಲವರೇ ನಾಯಕರಾಗುವುದೇಕೆ?, ಅಥವಾ ನಾವು ಎಲ್ಲದರಲ್ಲಿಯೂ ಗೆಲುವು ಸಾಧಿಸಲಾರೆವು ಏಕೆ ?

ಗೆಳೆಯರೇ ಬನ್ನಿ. ನಮ್ಮನ್ನು ಗೆಲುವಿನೆಡೆಗೆ ಕೊಂಡೊಯ್ಯಬಹುದಾದಂತಹ ಗುಣಗಳು ನಮ್ಮಲ್ಲಿ ಅಂತರ್ಗತವಾಗಿವೆ. ಅವುಗಳನ್ನು ನಾವು ನಮ್ಮ ಒತ್ತಡ, ಸಿಟ್ಟು ಸೆಡಕು, ಹಮ್ಮು ಬಿಗುಮಾನಗಳಿಂದಾಗಿ ಅಂತರ್ಯದಲ್ಲೇ ಅದುಮಿಟ್ಟುಕೊಂಡಿದ್ದೇವೆ. ಅವುಗಳನ್ನು ಹೊತೆಗೆದರೆ ಖಂಡಿತಾ ನಾವು ನಮ್ಮ ಪ್ರತಿ ಕಾರ್ಯದಲ್ಲಿಯೂ ಗೆಲುವು ಸಾಧಿಸ ಬಲ್ಲೆವು.
ಅವು ಯಾವುವು ಈಗ ನೋಡೋಣ.

ಹನ್ನೊಂದು ನಮ್ಮಲ್ಲಿನ ಅಂತರ್ಗತ ಶಕ್ತಿಗಳು ಹೀಗಿವೆ.


. ಕಾಮನ್ ಸೆನ್ಸ್: ತಾರ್ಕಿಕ ಆಲೋಚನೆ, ಒಂದು ಸಮಸ್ಯೆಯ ಪರಿಹಾರವನ್ನು ಗುರುತಿಸುವುದಕ್ಕಾಗಿ ಸಮಸ್ಯೆಯನ್ನು ಯಾವ ಕಡೆಯಿಂದ ಎದುರಿಸಬೇಕೆನ್ನುವುದೇ ಕಾಮನ್ ಸೆನ್ಸ್. ನಮ್ಮನ್ನು ಪ್ರಾಣಿಗಳಿಂದ ಭಿನ್ನವಾಗಿ ಮಾಡಿರುವುದೇನು? ನಮ್ಮ ಕೈ ಬೆರಳುಗಳು. ಕೈಗಳಿಂದಲೇ ಆಯುಧಗಳ ಸಹಾಯದಿಂದ ಕೂಡಾ ಬೇಟೆಯಾಡಬಹುದೆಂದು ಗ್ರಹಿಸಿದ ಕಾಮನ್ ಸೆನ್ಸ್ ನಿಂದ. ಅಲ್ಲಿಂದಲೇ ಮಾನವನ ಚಕ್ರಗಳಿಂದ ಮಂಗಳ ಲೋಕದವರೆಗಿನ ಯಾನವು ಆರಂಭವಾಗಿದ್ದು.

. ಪಾಜಿಟಿವ್ ಥಿಂಕಿಂಗ್: ವಾಸ್ತವವಾದ ರೂಢಿಗತ ಆಲೋಚನೆ. ನಿಮಗೆ ಒಂದು ಸಂದರ್ಶನಕ್ಕಾಗಿ ಮೆಜಿಸ್ಟಿಕ್ ನಿಂದ ಜಿಗಣಿಗೆ ಹೋಗಬೇಕಾಗಿದೆಯೆಂದುಕೊಳ್ಳಿ. ನಿಮ್ಮ ಆಲೋಚನೆಯೆಲ್ಲವೂ ಅಲ್ಲಿನ ಸಂದರ್ಶನಕ್ಕೆ ಕೇಳಬಹುದಾದ ಪ್ರಶ್ನೆಗಳಲ್ಲಿ ಅಥವಾ ಅಲ್ಲಿನ ಮುಂದಾಗಬಹುದಾದ ಫಲಿತಾಂಶದ ಆಲೋಚನೆಯಲ್ಲಿರುತ್ತೆಯೇ ವಿನಹಾ, ಅಲ್ಲಿಗೆ ತಲುಪುವಾಗ ಆಗಬಹುದಾದಂತಹ ಬೇರೆ ಆಕಸ್ಮಿಕಗಳ ಬಗೆಗೆ ಅಲ್ಲ. ವಾಸ್ತವವಾಗಿ ನಮ್ಮ ಸಂದರ್ಶನದ ಉತ್ತೀರ್ಣ ಅನುತ್ತೀರ್ಣತೆಗಳಷ್ಟೇ ನಡುವೆ ಸಂಭವಿಸಬಹುದಾದ ಆಕಸ್ಮಿಕಗಳ ಪಾಲೂ ಇರುತ್ತವೆಯಾದರೂ ಅದನ್ನು ನಾವು ಗಮನಿಸುವುದೇ ಇಲ್ಲ, ಅಂದರೆ ನಮಗೆ ನಮ್ಮ ಮೇಲಿನ ನಂಬಿಕೆಗಿಂತಲೂ ವಾಹನದ ಚಾಲಕನ ಮೇಲಿನ ನಂಬುಗೆಯೇ ಜಾಸ್ತಿಯಾಯಿತಲ್ಲ!!. ನಾವು ವಾಸ್ತವ ವಾಗಿ ರೂಢಿಗತ ಆಲೋಚನೆಯನ್ನೂ ಸೇರಿಸಿ ಆಲೋಚಿಸಿದರೆ ನಮಗೆ ಬರಬಹುದಾದ ಟೆನ್ಷನ್ ನಿಂದ ಮುಕ್ತಿ ಕಾಣಬಹುದು ನಮ್ಮ ಮೇಲಿನ ನಂಬುಗೆ ನಮಗೆ ಜಾಸ್ತಿಯಾಗಿ.

. ಏಕಾಗ್ರತೆ: ಮೆದುಳು ಒಂದು ಜನ ನಿಬಿಡ ಹೆದ್ದಾರಿಯಂತೆ , ಅದರಲ್ಲಿ ಸೈಕಲ್ ನಿಂದ ಹಿಡಿದು ಸಾಮಾನು ತುಂಬಿದ ಲಾರಿಯ ವರೆಗೆ ಹೋಲಿಸ ಬಲ್ಲಂತಹಾ ಆಲೋಚನೆಗಳು ದೊಡ್ದ ಶಬ್ದ ದೊಂದಿಗೆ ಅತ್ತಿತ್ತ ಪ್ರಯಾಣ ಮಾಡುತ್ತಿರುತ್ತವೆ. ಲೆಕ್ಕದ ತರಗತಿ ಮುಗಿದ ಕೂಡಲೇ ವಿಜ್ಞಾನ ವಿಷಯಕ್ಕೆ ಸನ್ನದ್ಧನಾಗಿರುವ ವಿಧ್ಯಾರ್ಥಿಯಂತೆ ನಮ್ಮ ಮನಸ್ಸಿನಲ್ಲೂ ಪ್ರತಿಯೊಂದೂ ವಿಷಯದ ಬಗೆಗೆ ಜೀವನದಲ್ಲಿ ಕಂಪಾರ್ಟಮೆಂಟಲೈಜೇಶನ್ ಮಾಡಿಟ್ಟುಕೊಳ್ಳಬೇಕು, ಇದನ್ನೇ ಕಲಿತುಕೊಳ್ಳಬೇಕಾಗಿರುವುದು.

. ಮಟ್ಟ ಸಾಮರ್ಥ್ಯ: ಗೊರ್ಬಚೇವ್, ವಿನೋದ್ ಕಾಂಬ್ಳಿ, ಧೀರೂಬಾಯ್ ಅಂಬಾನಿ, ಮೈಕೇಲ್ ಕಾಕ್ಸನ್, ಮತ್ತು ರಾಜೀವ್ ಗಾಂಧಿ, ಸೈಫ್ ಆಲಿಖಾನ್, ಅಜಯ ಜಡೇಜಾ ಇವರಿಬ್ಬರಲ್ಲಿ ವ್ಯತ್ಯಾಸ ಏನು ಗೊತ್ತಾ?
ಎರಡನೆಯವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ ಸ್ವ ಸಾಮರ್ಥ್ಯದಿಂದ ತಮ್ಮ ಮಟ್ಟ ಕಾಯ್ದುಕೊಂಡರೆ ಇನ್ನುಳಿದವರು ತನ್ನ ಸ್ವ ಸಾಮರ್ಥ್ಯದಿಂದಲೇ ಈಗಿನ ಮಟ್ಟಕೆ ಏರಿದವರು. ನಿರಂತರ ಪರಿಶ್ರಮದಿಂದಲೇ ಇವು ಸಾಧ್ಯ.ಅದಕ್ಕೇ ನಾವು ನಮ್ಮ ಮಟ್ಟ ಮತ್ತು ಸಾಮರ್ಥ್ಯವನ್ನು ಗೃಹಿಸಿಯೇ ನಮ್ಮ ಮುಂದಿನ ದಾರಿಯನ್ನೂ ಕಂಡುಕೊಂಡು ಕೃಮಿಸಬೇಕು.

. ಕನಸುಗಳು ಕನಸುಗಳೇ ಆದರೆ ಅವನ್ನು ನೆಸಸು ಮಾಡಬೇಕಾದರೆ ನಮ್ಮ ಗುರಿಯನ್ನು ಕಂಡು ಕೊಂಡು ಅದರತ್ತ ಸಾಗುವುದಕ್ಕೆ ನಮ್ಮ ಚಿಕ್ಕಂದಿನ ಓದಿದ ಕಥೆಗಳು ಕಥೆಗಳು ನಾವು ನೋಡುವ ಸಿನೇಮಾ ಮುಂತಾದವುಗಳು ನಮ್ಮಲ್ಲಿ ಪ್ರೇರಣೆಯಾಗಿಸಿಕೊಂಡು ಮುಂದುವರಿಯಬಹುದು.

. ನಾಯಕತ್ವದ ಲಕ್ಷಣಗಳು: ನಾನಿಲ್ಲಿ ಹೇಳುತ್ತಿರುವುದು ಗಾಂಧಿ ಸಾಯಿಬಾಬಾ ರಂತವರ ಎಲ್ಲರನ್ನೂ ಅನುಯಾಯಿ ಮಾಡಿಸಿಕೊಂಡಂತಹ ನಾಯಕತ್ವದ ಬಗೆಗಲ್ಲ. ಬದಲು ನಮ್ಮ ನಾಲ್ಕು ಜನ್ಬ ಸ್ನೇಹಿತರಲ್ಲಿಯೇ ಒಬ್ಬ ನಾಯಕನಿರುವನು, ನಮಗೆ ಇಷ್ಟವಿಲ್ಲದಿದ್ದರೂ ಅವನ ಇಷ್ಟದ ಸಿನೇಮಾಕ್ಕೆ ಅವನೊಂದಿಗೆ ಹೋಗುತ್ತೇವೆ, ಇನ್ನೊಮ್ಮೆ ನಿಮಗಿಷ್ಟವಾದ ಸಿನೇಮಾಕೆ ಅವನನ್ನು ಕೊಂಡು ಹೋಗುವ ಕ್ಷಮತ್ವ ನಿಮ್ಮಲ್ಲಿರಬೇಕು. ನಾಯಕನಾದವನಿಗೆ ಸಡಿಲ ಹಿಡಿತ ಎರಡೂ ಲಕ್ಷಣಗಳಿರಬೇಕು.

. ಪ್ರೇರಣೆ: ಪ್ರಮುಖ ವ್ಯಕ್ತಿಗಳ ಜೀವನಾ ವಿಧಾನದಿಂದ ನಾವು ಪ್ರೇರಣೆ ಹೊಂದ ಬೇಕು, ಅವರನ್ನೇ ದೇವರಂತೆ ಪೂಜಿಸುವುದಲ್ಲ. ಅವರಲ್ಲಿನ ಒಳ್ಳೆಯ ಅಂಶಗಳನ್ನೇ ತೆಗೆದುಕೊಂಡು ಅವರು ಮಾಡಿದ ತಪ್ಪನ್ನು ನಮಗೆ ಪಾಠವಾಗಿರಿಸಿಕೊಂಡು ನಮ್ಮ ಬದುಕಿನಲ್ಲಿ ಸೋಪಾನ ನಿರ್ಮಿಸಿಕೊಳಬೇಕು.

. ಅಂತರ್ಮುಖಲೋಚನೆ: ನಾವು ಯಾವ ಕ್ಷೇತ್ರದಲ್ಲಿ ಅಭಿವ್ರದ್ಧಿ ಸಾಧಿಸಬಲ್ಲೆವೋ ನಮ್ಮ ಲ್ಲಿಯ ಆಶಕ್ತಿಯನ್ನು ಸಾಧ್ಯವಾದಷ್ಟೂ ಬೇಗ ತಿಳಿದು ಕೊಳುವುದೇ ಅಂತರ್ಮುಖಾಲೋಚನೆ.

. ಭಾಷೆ, ಸಂಭಾಷಣೆ: ಮನುಷ್ಯರಿಗೆ ಪ್ರಾಣಿಗಳಿಗೆ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಭಾಷೆಯಾದರೆ ಮನುಷ್ಯರನ್ನೂ ಶ್ರೇಷ್ಠರನ್ನು ಬೇರ್ಪಡಿಸುವುದು ಸಂಭಾಷಣೆ ಭಾಷೆಯ ಮೇಲಿನ ಅಧಿಕಾರ.

೧೦. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು:

೧೧. ಶ್ರೇಷ್ಠತೆಯನ್ನು ಗುರುತಿಸುವುದು:
--------------------------------------------------------
ಬೆಳ್ಳಾಲ ಗೋಪೀನಾಥ ರಾವ್ ಅವರ ಭಾಷಣದ ಸಾರಾಂಶ

ವಾಕ್ಪಥ ಆರನೇ ಗೋಷ್ಠಿಯ ದ್ರುಶ್ಯಾವಳಿಗಳು


ರಘು ಎಸ ಪಿಯವರ ಭಾಷಣ





ಹೊಳೆ ನರಸಿಪುರ ಮ೦ಜುನಾಥರ ಭಾಷಣ


ಭಾಷಣದ ವಿಮರ್ಶೆಗಳು


ಆಶುಭಾಷಣ








ವಾಕ್ಪಥದ ಸಮಯಪರಿಪಾಲನೆಯ ವಿವರ ಪಾರ್ಥಸಾರಥಿಯವರಿ೦ದ

ಬೆಳ್ಳಾಲ ಗೋಪಿನಾಥ ರಾಯರಿ೦ದ ವಿಶೇಷ ಭಾಷಣ






 ಮುಕ್ತಾಯ

Sunday, 21 August 2011

ವಾಕ್ಪಥ ಆರನೆಯ ಗೋಷ್ಠಿ ಒಂದು ವರದಿ

ಪ್ರತಿ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತಿದ್ದ ವಾಕ್ಪಥ ಗೋಷ್ಟಿಯು ಈ ಬಾರಿ ಮೂರನೇ ಭಾನುವಾರ ಅಂದರೆ ೨೧ ಅಗಸ್ಟ್ ೨೦೧೧ ರಂದು ಬಸವನಗುಡಿಯಲ್ಲಿರುವ ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ವಾಕ್ಪಥ ತನ್ನ ಐದು ಹೆಜ್ಜೆಗಳನ್ನು ಪೂರೈಸಿ ಆರನೇ ಹೆಜ್ಜೆಗೆ ಕಾಲಿಟ್ಟಿತ್ತು. ಈ ಬಾರಿ ಗೋಷ್ಟಿಯ ನಿರ್ವಹಣೆ ಹೊತ್ತಿದ್ದವರು ವಾಕ್ಪಥದ ಸೃಷ್ಟಿಕರ್ತ ಶ್ರೀಯುತ ಪ್ರಭು ಮೂರ್ತಿಯವರು. ವಾಕ್ಪಥದ ಮುಖ್ಯ ನಿಯಮ ಸಮಯ ಪರಿಪಾಲನೆ. ಅದರಂತೆ ಸರಿಯಾಗಿ ೩.೧೫ ಕ್ಕೆ ಗೋಷ್ಠಿ ಪ್ರಾರಂಭವಾಯಿತು. ಈ ಬಾರಿಯ ಗೋಷ್ಟಿಯ ಭಾಷಣಕಾರರು ಶ್ರೀಯುತ ರಘು ಎಸ್.ಪಿ ಹಾಗೂ ಶ್ರೀಯುತ ಹೊಳೆನರಸಿಪುರ ಮಂಜುನಾಥ ಅಲಿಯಾಸ್ ದುಬೈ ಮಂಜಣ್ಣ ಅವರು. ವಿಶೇಷ ಭಾಷಣವನ್ನು ಶ್ರೀಯುತ ಬೆಳ್ಲಾಲ ಗೋಪಿನಾಥರಾಯರು ಮಂಡಿಸಲಿದ್ದರು. ಭಾಷಣಕಾರ ಪರಿಚಯವನ್ನು ಮಾಡಿಕೊಟ್ಟ ಪ್ರಭು ಮೂರ್ತಿಯವರು ರಘುರವರನ್ನು ತಮ್ಮ ಭಾಷಣ ಮಂಡಿಸಲು ವೇದಿಕೆಗೆ ಆಹ್ವಾನಿಸಿದರು.
ರಘುರವರು ಆಯ್ದುಕೊಂಡಿದ್ದ ಭಾಷಣದ ವಿಷಯ ರೈತ ಮತ್ತು ಕೈಗಾರಿಕೆ ಹಾಗೂ ರೈತ ಮತ್ತು ಕಾನೂನು 
ಇತ್ತೀಚಿನ ದಿನಗಳಲ್ಲಿ ಆಧುನೀಕರಣ, ಜಾಗತೀಕರಣ, ನಗರೀಕರಣದ ಗುಂಗಿನಲ್ಲಿ ಬಿದ್ದು ಜನರು ರೈತರನ್ನು ರೈತಾಪಿ ವರ್ಗದವರನ್ನು ಮರೆಯುತ್ತಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಕೈಗಾರಿಕೋದ್ಯಮದಿಂದ ರೈತನ ಭೂಮಿಗಳನ್ನು ಕಬಳಿಸಿ ಕೈಗಾರಿಕೆಗಳನ್ನು ನಿರ್ಮಿಸಿ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತಿದ್ದಾರೆ. ಅನ್ನ ನೀಡುವ ರೈತನನ್ನು ಕಡೆಗಣಿಸುತ್ತಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಒಂದು ಕೈಗಾರಿಕೆ ಸ್ಥಾಪನೆಯಿಂದ ೧೦೦ ಜನ ಉದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡಬಹುದು. ಆದರೆ ಎಷ್ಟು ವರ್ಷ ಉದ್ಯೋಗ ನೀಡುತ್ತಾರೆ. ಅದೇ ಒಂದು ಎಕರೆ ಜಮೀನಿನಲ್ಲಿ ಒಬ್ಬ ರೈತ ತನ್ನ ಜೀವಿತಾವಧಿಯವರೆಗೂ ಅನ್ನ ನೀಡಬಲ್ಲ. ಅಂಥಹ ರೈತನ ಜಮೀನನ್ನು ನಮ್ಮ ಬಂಡವಾಳಶಾಹಿಗಳು ಕೈಗಾರಿಕೆಯ ಹೆಸರಿನಲ್ಲಿ ಕಬಳಿಸಿ ಆ ಕೈಗಾರಿಕೆಯಿಂದ ಬಿಡುವ ತ್ಯಾಜ್ಯದಿಂದ ನೀರನ್ನು ಕಲುಶಿತಗೊಳಿಸಿ ಭೂಮಿಯ ಫಲವತ್ತತೆಯನ್ನು ಕುಂಟಿಥಗೊಳಿಸಿ ಆ ಪ್ರದೇಶದಲ್ಲಿ ಒಂದು ಕಾಂಗ್ರೆಸ್ ಗಿಡ ಸಹ ಬೆಳೆಯದಂತೆ ಮಾಡುತ್ತಿದ್ದಾರೆ. ಇದು ಹೀಗೆ ಸಾಗಿದರೆ ಈ ದೇಶದ ಬೆನ್ನೆಲುಬಾಗಿರುವ ರೈತನ ಪರಿಸ್ಥಿತಿ ಏನು. ಇದು ಮೊದಲನೆಯ ಹಂತ
ಎರಡನೆಯ ಹಂತದಲ್ಲಿ ರೈತ ಮತ್ತು ಕಾನೂನಿನ ವಿಷಯಕ್ಕೆ ಬಂದರೆ ನಮ್ಮ ಮಣ್ಣಿನ ಮಕ್ಕಳು ಕಲ್ಲಿನ ಮಕ್ಕಳೆಂಬ ರಾಜಕೀಯ ವ್ಯಕ್ತಿಗಳು ನಾವು ನಮ್ಮ ಅಧಿಕಾರಾವಧಿಯಲ್ಲಿ ರೈತನಿಗೆ ಶೇಕಡಾ ಎರಡು ಪ್ರತಿಶತ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಅಲ್ಲಿ ನಡೆಯುತ್ತಿರುವುದೇನು ಯಾವುದೇ ಗ್ರಾಮೀಣ ಬ್ಯಾಂಕಿಗೆ ನೀವು ಹೋದರೆ ಅಲ್ಲಿ ಎರಡು ಪ್ರತಿಶತ ದರದಲ್ಲಿ ಸಾಲ ಪಡೆದ ರೈತ ಅದೇ ಬ್ಯಾಂಕಿನಲ್ಲಿ ೮ ಪ್ರತಿಶತ ಬಡ್ಡಿ ದರಕ್ಕೆ ಥೆವಣಿ ಹೂಡುತ್ತಿದ್ದಾನೆ. ಸ್ವಾಮಿ ನಮ್ಮ ರೈತನಿಗೆ ನಿಮ್ಮ ಸಾಲ ಬೇಡ ಸ್ವಾಮಿ. ನಮ್ಮ ರೈತ ಸ್ವಾವಲಂಬಿ ಆತನಿಗೆ ದುಡ್ಡಿನ ಅವಶ್ಯಕತೆ ಬಂದರೆ ತಾನು ಬೆಳೆದ ಬೆಳೆ ಮಾರಿ ಹಣ ಸಂಪಾದಿಸುತ್ತಿದ್ದಾನೆ. ಆತನಿಗೆ ಅವಶ್ಯಕತೆ ಇರುವುದು ಉತ್ತಮ ಗೊಬ್ಬರ, ಸಬ್ಸಿಡಿ ದರದಲ್ಲಿ ಬೀಜಗಳು ಹಾಗೂ ತಾನು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ಇಷ್ಟು ಕೊಡಿ ಸಾಕು. ಆದರೆ ನೀವು ಮಾಡುತ್ತಿರುವುದು ಏನು ಆತನಿಗೆ ಸಾಲ ನೀಡಿ ಆತನನ್ನು ಸೋಮಾರಿಯಾಗಿ ಮಾಡಿ ದಾಸ್ಯಕ್ಕೆ ಗುರಿ ಮಾಡುತ್ತಿದ್ದೀರ.
ಇವಿಷ್ಟು ರಘು ಅವರ ಭಾಷಣದ ಸಾರಾಂಶ. ರಘು ಅವರು ತಮಗಿ ನಿಗದಿ ಪಡಿಸಿದ ಹತ್ತು ನಿಮಿಷಕ್ಕಿಂತ ಸ್ವಲ್ಪವೆ ಜಾಸ್ತಿ ಸಮಯ ತೆಗೆದುಕೊಂಡು ತಮ್ಮ ಭಾಷಣವನ್ನು ಪ್ರಭಾವಶಾಲಿಯಾಗಿ ಮಂಡಿಸಿದರು. ಇನ್ನು ಇವರ ಭಾಷಣ ವಿಮರ್ಶಕರಾಗಿ ಶ್ರೀಯುತ ಹರೀಶ್ ಆತ್ರೇಯ ಅವರು ತಮ್ಮ ಅನಿಸಿಕೆಯನ್ನು ತಿಳಿಸಿದರು. ರಘು ಅವರ ಭಾಷಣದಲ್ಲಿ ಒಂದೇ ಒಂದು ಋಣಾತ್ಮಕ ಅಂಶವೆಂದರೆ ಅಲ್ಲಲ್ಲಿ ಆಂಗ್ಲ ಪದಗಳನ್ನು ಬಳಸಿದ್ದು ಇಷ್ಟು ಬಿಟ್ಟರೆ ಅವರ ಭಾಷಣ ಸೊಗಸಾಗಿತ್ತು ಎಂದು ಹೇಳಿ ತಮ್ಮ ವಿಮರ್ಶೆಯನ್ನು ತಿಳಿಸಿದರು.
ಎರಡನೇ ಭಾಷಣಕಾರರಾಗಿ ಶ್ರೀಯುತ ಮಂಜುನಾಥ ಅವರು ಆಯ್ದುಕೊಂಡ ವಿಷಯ ಇಂದಿನ ಭಾರತದಲ್ಲಿ ಭ್ರಷ್ಟಾಚಾರ ಹಾಗೂ ನೈತಿಕತೆ
ಭ್ರಷ್ಟಾಚಾರ ಇಂದು ನೆನ್ನೆಯದಲ್ಲ ಪುರಾಣ ಕಾಲದಿಂದಲೂ ನಡೆದುಕೊಂಡೇ ಬಂದಿದೆ ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಭ್ರಷ್ಟಾಚಾರ ಕಾಣಬಹುದು. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ರಥದ ಚಕ್ರ ಮಣ್ಣಿನಲ್ಲಿ ಹೂತು ಹೋಗಿದ್ದಾಗ ಕರ್ಣನು ರಥವನ್ನು ಮೇಲೆತ್ತುವ ಸಮಯದಲ್ಲಿ ಅರ್ಜುನನಿಗೆ ಬಾಣ ಹೂಡಲು ಸೂಚಿಸಿದ ಕಪಟನಾಟಕ ಸೂತ್ರಧಾರಿ ಕೃಷ್ಣ ಮಾಡಿದ್ದು ಅದನ್ನೇ ಅಲ್ಲವೇ. ಹಾಗೆ ಭ್ರಷ್ಟಾಚಾರ ಅಂದಿನಿಂದಲೂ ಇದೆ. ನಮಗೆಲ್ಲ ತಿಳಿದಿರುವಂತೆ ಮನೆಯೇ ಮೊದಲ ಪಾಠಶಾಲೆ ಹಾಗೆ ಭ್ರಷ್ಟಾಚಾರಕ್ಕೂ ಮನೆಯೇ ಮೊದಲ ಪಾಠಶಾಲೆ ಹೇಗೆಂದರೆ ಮನೆಯಲ್ಲಿ ಮಕ್ಕಳಿಗೆ ಏನಾದರೂ ಕೆಲಸ ಹೇಳುವ ಸಮಯ ಬಂದರೆ ಉದಾಹರಣೆಗೆ ಅಂಗಡಿಯಿಂದ ಸಕ್ಕರೆಯೋ ಅಥವಾ ಇನ್ನೇನಾದರೂ ವಸ್ತುಗಳನ್ನು ತೆಗೆದುಕೊಂಡು ಬರಲು ಮಕ್ಕಳಿಗೆ ಸಿಹಿ ತಿಂಡಿಯ ಆಸೆ ತೋರಿಸುವುದು ಅಥವಾ ಚಿಲ್ಲರೆ ಹಣದ ಆಸೆ ತೋರಿಸುವುದು. ಇದರಿಂದ ಚಿಕ್ಕಂದಿನಿಂದಲೇ ಮಕ್ಕಳ ಮೇಲೆ ಬೀರುವ ಪ್ರಭಾವ ಎಂತಹುದು ಎಂದು ಎಂದಾದರೂ ಯೋಚಿಸಿದ್ದೇವ? ಬಹುಷಃ ತಾವೆಲ್ಲರೂ ಕಡಿದಾಳ್ ಮಂಜಪ್ಪ ನವರ ಹೆಸರನ್ನು ಕೇಳಿರುತ್ತೀರ. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಅವರು ವಿಧಾನಸಭೆಗೆ ಸೈಕಲ್ ನಲ್ಲಿ ಬರುತ್ತಿದ್ದವರು. ಎಷ್ಟು ಜನ ಅಂಥಹ ನಿಷ್ಟಾವಂತರು ಇದ್ದಾರೆ. ಇದ್ದಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ಮತದಾನದ ಬಗ್ಗೆ ಜನಕ್ಕೆ ಇರುವ ಅಸಡ್ಡೆಯೇ ಮುಖ್ಯ ಕಾರಣ. ಪ್ರತಿಸಲ ಚುನಾವಣಾ ನಡೆದಾಗ ೩೦, ೪೦ ೫೦ ಪ್ರತಿಶತ ಮಾತ್ರ ಮತದಾನವಾಗುತ್ತಿದೆ. ಇನ್ನುಳಿದ ಮತಗಳ ಭ್ರಷ್ಟರ ಪಾಲಾಗುತ್ತಿದೆ. ವಿದ್ಯಾವಂತರು ಮತಕಟ್ಟೆಯಿಂದ ದೂರ ಉಳಿದಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಹೆಚ್ಚು ಮತದಾನವಾಗಬೇಕು ಇದ್ದದರಲ್ಲಿ ಅತೀ ಕಡಿಮೆ ಭ್ರಷ್ಟರನ್ನು ಆರಿಸೋಣ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಣ್ಣಾ ಹಜಾರೆ ಎಬ್ಬಿಸಿರುವ ಬಿರುಗಾಳಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎದ್ದಿರುವುದು ನಿಮಗೆಲ್ಲ ತಿಳಿದಿರುವ ಸಂಗತಿ. ಪ್ರತಿಯೊಬ್ಬರೂ ತಾವು ಅಣ್ಣನ ಬೆಂಬಲಿಗರು ಎಂದಷ್ಟೇ ಹೇಳಿಕೊಂಡರೆ ಸಾಲದು. ಮೊದಲು ತಮ್ಮನ್ನು ತಾವು ಪರಿಶೀಲಿಸಿಕೊಳ್ಳಬೇಕು. ತಮ್ಮಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಶುರುವಾಗಬೇಕು.
ಇವಿಷ್ಟು ಹೊಳೆನರಸಿಪುರ ಮಂಜುನಾಥ ಅವರ ಭಾಷಣದ ಸಾರಾಂಶ. ಇವರ ಭಾಷಣದ ವಿಮರ್ಶೆಯನ್ನು ಜಯಂತ್ ರಾಮಾಚಾರ್ ಅವರು ನಿರ್ವಹಿಸಿದರು. ಮಂಜಣ್ಣ ಅವರ ಕಂಚಿನ ಕಂಠ, ಭಾಷೆಯ ಮೇಲೆ ಅವರಿಗಿರುವ ಹಿಡಿತ, ನಿರರ್ಗಳವಾಗಿ ಸರಾಗವಾಗಿ ಪ್ರಭಾವಿಯಾಗಿ ಭಾಷಣ ಮಂಡಿಸುವ ಶೈಲಿ ಅವರ ಧನಾತ್ಮಕ ಅಂಶಗಳಾದರೆ ಅಲ್ಲಲ್ಲಿ ಆಂಗ್ಲ ಪದಗಳನ್ನು ಬಳಸಿದ್ದು ಅವರ ಋಣಾತ್ಮಕ ಅಂಶವೆಂದು ತಿಳಿಸಿ ತಮ್ಮ ವಿಮರ್ಶೆಯನ್ನು ಮಂಡಿಸಿದರು.
ಈ ಎರಡು ಭಾಷಣಗಳ ನಂತರ ಆಶುಭಾಷಣವನ್ನು ನಿರ್ವಹಿಸಿದವರು ಶ್ರೀಯುತ ಹೊಳೆನರಸಿಪುರ ಮಂಜುನಾಥ ಅವರು. ಅವರು ಕೊಟ್ಟ ವಿಷಯ ಇಂದಿನ ಚಲನಚಿತ್ರ ಮಾಧ್ಯಮ ಜನರಿಗೆ ನೀಡುತ್ತಿರುವ ಸಂದೇಶ ಏನು?
ಆಶುಭಾಷಣವನ್ನು ಮಂಡಿಸಿದವರು ಶ್ರೀಯುತ ಮಧ್ವೇಶ್, ಹಾಗೂ ಹೊಸ ಪಥಿಕರಾದ ಶ್ರೀಯುತ ಶ್ರೀನಾಥ್, ಶ್ರೀಯುತ ರುದ್ರೇಶ್ ಹಾಗೂ ಶ್ರೀಯುತ ಹರೀಶ್ ಆತ್ರೇಯ ಅವರು.
ಹಿಂದಿನ ಚಿತ್ರಗಳು ಸಂಸಾರ ಸಮೇತವಾಗಿ ನೋಡುವಂಥಹ ಚಿತ್ರಗಳಾಗಿದ್ದು ಉತ್ತಮ ಸಂದೇಶ, ಉತ್ತಮ ಸಾಹಿತ್ಯ, ಉತ್ತಮ ನಿರ್ದೇಶನವನ್ನು ಹೊಂದಿದ್ದು ಬಹಳ ಕಾಲದವರೆಗೂ ಮೆಲುಕು ಹಾಕುವಂತಾದಾಗಿದ್ದು ಇಂದಿನ ಚಿತ್ರಗಳು ಕೊಡುತ್ತಿರುವ ಸಂದೇಶ ಚಿಕ್ಕ ಮಕ್ಕಳಿಂದ ಹಿಡಿದೂ ದೊಡ್ದವರವರೆಗೂ ಕೆಟ್ಟ ಸಂದೇಶವನ್ನು ಕೊಡುತ್ತಿರುವುದು. ಇನ್ನು ಇಂದಿನ ಸಾಹಿತ್ಯ ಅಂತೂ ಬೇಡವೇ ಬೇಡ ಒಂದು ಕಾಲದಲ್ಲಿ "ಅಮ್ಮ ಸೀತಮ್ಮ ತಂದೆ ಶ್ರೀರಾಮ" ಎಂಬ ಸಾಹಿತ್ಯ ಇದ್ದರೆ ಇಂದು " ಅಪ್ಪ ಲೂಸಾ, ಅಮ್ಮ ಲೂಸಾ"ಎಂಬಂಥಹ ಸಾಹಿತ್ಯ ಬರುತ್ತಿರುವುದು ನಿಜವಾಗಿಯೂ ದುರದೃಷ್ಟಕರ.
ಇನ್ನು ಸಮಯಪರಿಪಾಲಕರಾಗಿ ಶ್ರೀಯುತ ರಾಮ್ ಮೋಹನ್ ಅವರು ಯಾರ್ಯಾರು ಎಷ್ಟೆಷ್ಟು ಸಮಯವನ್ನು ತೆಗೆದುಕೊಂಡರು ಎಂದು ವಿವರಿಸಿದರೆ ಶ್ರೀಯುತ ಪಾರ್ಥಸಾರಥಿಯವರು ವ್ಯಾಕರಣ ಶುದ್ಧಿಯನ್ನು "ಮೊಸರಿನಲ್ಲಿ ಕಲ್ಲು ಹುಡುಕುವುದೆಂದು" ಹಾಸ್ಯವಾಗಿ ವರ್ಣಿಸಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಈ ಬಾರಿಯ ವಾಕ್ಪಥ ಗೋಷ್ಟಿಗೆ ಸಂಪದಿಗರಾದ ಶ್ರೀಯುತ ಶ್ರೀನಾಥ್ ಭಲ್ಲೆ ಆಗಮಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದು ಸಂತೋಷವಾಗಿತ್ತು.
ಇಲ್ಲಿಗೆ ಅಧಿಕೃತವಾಗಿ ವಾಕ್ಪಥ ಆರನೇ ಗೋಷ್ಟಿಯ ಮುಕ್ತಾಯವಾಗಿ ನಂತರ ಮುಂದಿನ ಗೋಷ್ಟಿಯ ರೂಪುರೇಷೆಗಳನ್ನು ನಿರ್ಧರಿಸಲಾಯಿತು. ಮುಂದಿನ ಗೋಷ್ಟಿಯ ನಿರ್ವಾಹಕರಾಗಿ ಜಯಂತ್ ರಾಮಾಚಾರ್ ಅವರಿಗೆ ವಾಕ್ಪಥದ ಫಲಕವನ್ನು ಹಸ್ತಾಂತರಿಸಲಾಯಿತು.
ಮುಂದಿನ ಗೋಷ್ಟಿಯ ದಿನಾಂಕ ಹಾಗೂ ಕಾರ್ಯಕ್ರಮಗಳ ಪಟ್ಟಿಯನ್ನು ಅತೀ ಶೀಘ್ರದಲ್ಲಿ ತಿಳಿಸಲಾಗುವುದು.

Wednesday, 10 August 2011

ವಾಕ್ಪಥ - ಆರನೆಯ ಹೆಜ್ಜೆ

ಮಾತನಾಡುವುದು ಎಲ್ಲರಿಗೂ ಪ್ರಿಯವಾದದ್ದು. ಆದರೆ ನಾಲ್ಕು ಜನರೆದುರು ಮಾತನಾಡುವುದಿದೆಯಲ್ಲ ಅದು ನಿಜಕ್ಕೂ ಸುಲಭಸಾಧ್ಯದ ಮಾತಲ್ಲ. ಒಳಗೊಳಗೇ ಕಡೆದು ಹೆಪ್ಪುಗಟ್ಟಿದ ಮಾತುಗಳನ್ನ ಪರಿಣಾಮಕಾರಿಯಾಗಿ ಹೊರಹಾಕುವುದು ಬರಹಗಳಲ್ಲಿ ಸುಲಭ ಸಾಧ್ಯ. ಮತ್ತೊ೦ದು ಬಗೆಯೆ೦ದರೆ ಬಾಯಿ೦ದ ಕಿವಿಗೆ ತಲುಪಿಸುವುದು ಇದು ಸಾಧ್ಯ ಮತ್ತು ಸರಳವಲ್ಲ. ನಾಲ್ಕಾರು ಕಣ್ಣುಗಳು ನಮ್ಮನ್ನು ದಿಟ್ಟಿಸುತ್ತಿರುತ್ತವೆ ಹಲವಾರು ಕಿವಿಗಳು ನಮ್ಮ ಮಾತನ್ನು ಕೇಳಲು ಸಿದ್ಧವಾಗಿರುತ್ತದೆ. ಇ೦ಥ ಸ೦ದರ್ಭದಲ್ಲಿ ಮಾತನಾಡುವುದು ಅದೂ ಹೇಳಬೇಕಾದುದನ್ನು ನೇರವಾಗಿ ಚೊಕ್ಕವಾಗಿ ಎದುರಿಗಿರುವವನ ಮನದಾಳಕ್ಕಿಳಿಯುವ೦ತೆ ಹೇಳುವುದು ಸುಲಭವಲ್ಲ. ವೇದಿಕೆಯಲ್ಲಿ ನಿ೦ತಾಗ ನಡುಕ ಹುಟ್ಟಿ ಮಾತು ತೊದಲಿ ಬೆವರು ಬಸಿಯತೊಡಗುತ್ತದೆ. ಎಷ್ಟೇ ಸಿದ್ದರಾಗಿ ಕನ್ನಡಿಯಮು೦ದೆ ನಿ೦ತು ನೂರು ಬಾರಿ ಪಾಠ ಒಪ್ಪಿಸಿದ್ದರೂ ಸಭಾಕ೦ಪನ ಬಿಡದು. ಇ೦ಥ ಮಾತನಾಡುವಿಕೆಯನ್ನು ಭಾಷಣವೆ೦ದು ಕರೆದು ಅದನ್ನು ಕಲೆಯೆ೦ದೇ ಕರೆಯಲಾಗಿದೆ. ಈ ಕಲೆಯನ್ನು ಬೆಳೆಸುವ ಸಲುವಾಗಿ ಹುಟ್ಟಿದ ಗು೦ಪು ’ವಾಕ್ಪಥ’. ಮೊದಲಿಗೆ ಟೋಸ್ಟ್ ಮಾಸ್ಟರ್ ಎ೦ಬ ಹೆಸರಿನಲ್ಲಿ ಸಾಗರದಾಚೆ ಆರ೦ಭವಾದ ಈ ದಾರಿ ಈಗ ಕನ್ನಡದಲ್ಲೂ ನಡೆಯುತ್ತಿರುವುದು ಹಳೆಯ ವಿಚಾರ . ಈಗಾಗಲೇ ಐದು ಹೆಜ್ಜೆಗಳನ್ನ ಪೂರೈಸಿದ ಈ ಪಥ ಇನ್ನು ಹೊಸ ರೀತಿಯಲ್ಲಿ ನಿಮ್ಮ ಮು೦ದೆ ಬರಲಿದೆ.
ನಮ್ಮಲ್ಲಿ ಅನೇಕ ವಿಷಯಗಣಿಗಳಿದ್ದಾರೆ ಆದರೆ ಅವರೆಲ್ಲಾ ಆಪ್ತರೊ೦ದಿಗೆ ಮಾತ್ರ ಸರಾಗವಾಗಿ ಮಾತನಾಡಬಲ್ಲರು. ವೇದಿಕೆ ಏರಿ ಮಾತನಾಡಲು ಸಣ್ನದೊ೦ದು ಹಿ೦ಜರಿಕೆಯಿ೦ದಲೋ ಇಲ್ಲ ಆತ್ಮವಿಶ್ವಾಸ ಇಲ್ಲದ ಭಯದಿ೦ದಲೋ ಹಿ೦ದೆ ಸರಿಯುತ್ತಿದ್ದಾರೆ. ಅವರಿಗಾಗಿ ಮತ್ತು ನಮಗಾಗಿ (ನಾವೂ ಬೆಳೆಯಬೇಕಲ್ಲ.) ಈ ತ೦ಡ ವಾಕ್ಪಥವನ್ನು ರೂಪಿಸಿಕೊ೦ಡು ಸಣ್ಣ ಪ್ರಮಾಣದ ವೇದಿಕೆಯನ್ನು ಸೃಷ್ತಿಸಿಕೊ೦ಡು ಮಾತುಗಾರರಿಗೆ ಗರಡಿಮನೆಯನ್ನು ನಿರ್ಮಿಸಿದೆ. ಇದರ ಸದುಪಯೋಗ ಪಡೆದುಕೊಳ್ಲಲು ವಿಷಯಾಗ್ರಣಿ ಮತ್ತು ವಿಷಯದಗಣಿಗಳು ಮು೦ದೆ ಬರಬೇಕು ಅವರ ಮಸ್ತಕದೊಳಗಿನ ವಿಷಯಗಳ ಆಕಾಶವನ್ನು ನಮ್ಮೆದುರಿಗೆ ಹರವಬೇಕು ಹಾಗಾದಗಲೇ ಜ್ಞಾನವಿಸ್ತಾರ ಮತ್ತು ವಿಷಯಗಳ ಹ೦ಚಿಕೊಳ್ಳುವಿಕೆ ಸಾಧ್ಯ. ಪಿಸು ಮಾತು ಒ೦ದು ಹೇಳಿಕೆಯಾಗುವ ನಿಟ್ಟಿನಲ್ಲಿ ನಾವು ಹೆಜ್ಜೆ ಇರಿಸೋಣ ಎಲ್ಲ ಮಾತುಗಳಿಗೆ ಕಿವಿಯಾಗೋಣ , ಆಸ್ವಾದಿಸೋಣ ಅದನ್ನು ವಿಮರ್ಷಿಸೋಣ ತಪ್ಪಿದ್ದರೆ ತಿದ್ದಿಕೊಳ್ಳೋಣ.
ವಾಕ್ಪಥದ ನಿಯಮಗಳು ಸರಳ..
೧) ಸಾಧ್ಯವಾದಷ್ಟು ಶುದ್ಧ ಕನ್ನಡದಲ್ಲಿ ಮಾತನಾಡಬೇಕು
೨) ಭಾಷಣಗಳಿಗೆ ನಿಗದಿತ ಸಮಯವಿರುತ್ತದೆ ಆ ಸಮಯದೊಳಗೆ ಭಾಷಣದ ವಸ್ತುವನ್ನುಪರಿಣಾಮಕಾರಿಯಾಗಿ ಕೇಳುಗನ ಕಿವಿಗೆ ತಲುಪಿಸ ಬೇಕು.
ಉತ್ತಮ ಕೇಳುಗ ವಿಮರ್ಶೆಕಾರನೂ ಹೌದು
ಪ್ರತಿ ತಿ೦ಗಳು ನಡೆಯುವ ಈ ಸಭೆಯನ್ನು ಒಬ್ಬೊಬ್ಬರು ಒ೦ದೊ೦ದು ಬಾರಿ ನಿರ್ವಹಿಸಬೇಕಾಗುತ್ತದೆ. ಆ ಕಾರಣದಿ೦ದ ಅವರಲ್ಲಿ ನಾಯಕತ್ವ ಗುಣಗಳ ಬೆಳವಣಿಗೆ, ಯೋಜನಾ ದೃಷ್ಟಿಕೋನದ ಪ್ರಬುದ್ಧತೆ. ವಾಕ್ಚಾತುರ್ಯ, ಕಾರ್ಯ ಚತುರತೆಗಳು ಬೆಳೆಯುತ್ತವೆ
ನೆನಪಿಡಿ ನಿರ್ವಹಣೆಗೂ ಅ೦ಕಗಳಿರುತ್ತವೆ.. :)
ಹೀಗೆ ಸರ್ವವಿಧದಿ೦ದಲೂ ಸಮೃದ್ಧವಾಗಿರು ಕಾರ್ಯದಲ್ಲಿ ನೀವೂ ಪಾಲ್ಗೊಳ್ಳಿ ನಿಮ್ಮನ್ನು ತೊಡಗಿಸಿಕೊಳ್ಳಿ .
ನಿಮಗಾಗಿ ಕಾಯುತ್ತಾ ವಾಕ್ಪಥ ತ೦ಡ

ಈ ಬಾರಿಯ ಭಾಷಣಗಳು
ಶ್ರೀ ಹೊಳೆ ನರಸೀಪುರ ಮ೦ಜುನಾಥ "ಇ೦ದಿನ ಜೀವನದಲ್ಲಿ ಭ್ರಷ್ಟಾಚಾರ ಮತ್ತು ನೈತಿಕ ಮೌಲ್ಯಗಳ ಪಾತ್ರ"."
ಶ್ರೀ ರಘು ಎಸ್ ಪಿ "ಕೈಗಾರಿಕೆ ಮತ್ತು ರೈತ ಹಾಗು ಕೈಗಾರಿಕೆ ಮತ್ತು ಕಾನೂನು"
ಶ್ರೀ ಹರೀಶ್ ಆತ್ರೇಯ "ಪ್ರಸಕ್ತ ಭಾರತದಲ್ಲಿ ಭಗತ್ ಸಿ೦ಗ್ ನ ಪ್ರಸ್ತುತತೆ"

ದಿನಾ೦ಕ ೨೧ ರ ಭಾನುವಾರದ೦ದು, ಸ೦ಜೆ ೩ ಕ್ಕೆ ಆರ೦ಭವಾಗಿ ೫ ಗ೦ಟೆಗೆ ಕೊನೆಯಾಗುತ್ತದೆ
 ೯೮೪೪೧೦೦೦೨೧ ಹರೀಶ್ ಆತ್ರೇಯ,

೯೮೪೪೭೦೧೭೦೫ ಬೆಳ್ಳಾಲ ಗೋಪೀನಾಥ ರಾಯರು

೯೬೨೦೯೩೬೫೭೬ ಹೊಳೆನರಸೀಪುರ ಮ೦ಜುನಾಥ



ಸ್ಥಳ ; ಸೃಷ್ಟಿ ವೆ೦ಚರ್ಸ್ ನ ಎರಡನೆ ಮಹಡಿಯಲ್ಲಿ

Monday, 18 July 2011

ವಾಕ್ಪಥ ೫ ನೇ ಹೆಜ್ಜೆ - ಒಂದು ವರದಿ

ವಾಕ್ಪಥ- ಹೆಜ್ಜೆ ೫

ಬಾನುವಾರ ಬೆಳಗ್ಗೆಯೆ ಮೋಡ ಮುಸುಕಿದ ವಾತವರಣ ಆಗಾಗ ಸಣ್ಣಗೆ ಚುಮುಕಿಸುವ ಮಳೆ. ಏಳುವಾಗಲೆ ತಡ. ಕನಕಪುರದ ರಸ್ತೆಯಲ್ಲಿರುವ APS Engineer ಕಾಲೇಜ್ ವರೆಗು ಮಗಳ ಜೊತೆ ಗಾಡಿಯಲ್ಲಿ  ಹೋಗಿ ಕಾಲೇಜು ನೋಡಿ ಬರಬೇಕೆಂದು ನಿನ್ನೆ ರಾತ್ರಿ ನಿರ್ದರಿಸಿದ್ದ ಕಾರ್ಯಕ್ರಮ ಮಧ್ಯಾನದ ನಂತರ ಹೋಗುವದೆಂದು ಮುಂದಕ್ಕೆ ಹಾಕಿ ಬೇಗ ಸಿದ್ದನಾಗಿ 'ವಾಕ್ಪಥ-೫', ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ 'ಸೃಷ್ಟಿ ವೆಂಚರ್ಸ್' ತಲುಪುವಾಗ ಸರಿಯಾಗಿ ೧೦ ಗಂಟೆ.
  ಎರಡನೆ ಮಹಡಿ ತಲುಪಿ ಒಳಗೆ ಹೋಗುವಾಗ ಆಗಲೆ ಎಲ್ಲರು ನೆರೆದಿದ್ದರು. ಸ್ನೇಹಿತರಾದ ಮಂಜು, ಗೋಪಿನಾಥರು, ರಘು, ಪ್ರಭು , ಆತ್ರೇಯ ಎಲ್ಲರಿಂದ ಅತ್ಮೀಯ ಬೆಚ್ಚನೆಯ ಸ್ವಾಗತ ಮನದಲ್ಲಿ ಮುದ ಮೂಡಿಸಿತ್ತು.ಕಾರ್ಯಕ್ರಮದ ವಿಶೇಷ ಬಾಷಣಕಾರ ಶ್ರೀ ರಘು ಹಾಲೂರ್ ಸಿದ್ದರಾಗಿ ಕುಳಿತ್ತಿದ್ದರು.ಹರೀಶರು ಸಮಯದ ದಂಡವನ್ನು ಹಿಡಿದು ಸಿದ್ದರಾದಂತೆ ಎಲ್ಲರು ಕಾರ್ಯಕ್ರಮದಲ್ಲಿ ಬಾಗವಹಿಸಲು ಸಜ್ಜಾದರು.
 ವಾಕ್ಪಥ-೫ ಗೋಷ್ಠಿಯ ನಿರ್ವಾಹಕರಾದ ಶ್ರೀಸುನೀಲ ದಾಸಪ್ಪನವರ ತಮ್ಮ ಆತ್ಮೀಯ ದ್ವನಿಯಲ್ಲಿ ಸ್ವಾಗತ ಕೋರುತ್ತ ಗೋಷ್ಠಿಯ ಪ್ರಸ್ಥುತತೆ ವಿವರಿಸುತ್ತ ಗೋಷ್ಠಿಗೆ ಚಾಲನೆ ನೀಡಿದರು.ಮೊದಲಿಗೆ ಮೂವರ ಬಾಷಣ ನಿಯಮಿತ ಅವದಿ ತಲಾ ಎಂಟು ನಿಮಿಷಗಳು.

ಮೊದಲನೆ ಭಾಷಣಕಾರರು ಶ್ರೀ ಕಿರಣ್ ಎಮ್ ಎಸ್. ತಮ್ಮ ಸ್ವಪರಿಚಯದೊಡನೆ ಆರಿಸಿಕೊಂಡ ವಿಷಯ ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆಗಳ ಬೆಳವಣಿಗೆಯ ಬಗ್ಗೆ. ಅವರು ಚಿಕ್ಕ ವಯಸ್ಸಿನಲ್ಲಿ ಚೆಂದಮಾಮ ಮುಂತಾದ ಶಿಶುಸಾಹಿತ್ಯವು ಹೇಗೆ ಮನಸ್ಸಿನಲ್ಲಿ ಕಥೆಗಳ ಕಲ್ಪನೆ ಹುಟ್ಟು ಹಾಕುವದೆಂದು ತಿಳಿಸುತ್ತ ನಂತರ ಅದೇ ಕಥಾಲೋಕಕ್ಕೆ ಸೆಳೆದೊಯ್ಯುವದೆಂದು ತಿಳಿಸಿದರು. ಅವರು   ಚಿತ್ತಾಲ ಮತ್ತು ತೇಜಸ್ವಿಯವರ ಕಾರಂತರ ಹೆಸರು ಪ್ರಸ್ತಾಪ ಮಾಡುತ್ತ,ಕನ್ನಡ ಸಾಹಿತ್ಯದಲ್ಲಿ ಕಥೆಗಳು ಹೇಗೆ ಬೇರುಗೊಂಡವು ಎಂದು ತಿಳಿಸಿದರು. ಈ ಮೂಲಕ ಕತೆಗಳ ಪಾತ್ರಗಳು ಸಂದರ್ಭಗಳು ಹೇಗೆ ರೂಪಗೊಳ್ಳುವ ಕ್ರಿಯೆ ನಡೆಯುವದೆಂದು ತಿಳಿಸಿದರು. ಅವರು ಮಾತನಾಡುವಾಗ ನನಗೆ ಅನ್ನಿಸಿದ್ದು ಸಣ್ಣ ಕಥೆಗಳ ಹುಟ್ಟುಬೆಳವಣಿಗೆಗಳಿಗೆ ರುವಾರಿಗಳಾದ ಮಾಸ್ತಿ,ಗೊರೂರು ಅವರ ಹೆಸರುಗಳನ್ನು ಹೇಳಬಹುದಿತ್ತು ಎಂದು. ಶ್ರೀಕಿರಣ್ ರವರ ಬಾಷಣ ಮೊಟ್ಟಮೊದಲಿಗೆ ವೇದಿಕೆ ಹತ್ತಿದವರಂತೆ ಇರದೆ ಸಾಕಷ್ಟು ಅಧಿಕಾರಯುತವಾಗಿತ್ತು ಅನ್ನಿಸಿತು. ಅಲ್ಲದೆ ಆರಿಸಿಕೊಂಡ ವಿಷಯವು ನನ್ನ ಮನಸಿಗೆ ಹತ್ತಿರವಾಗಿತ್ತು.

 ಎರಡನೆ ಬಾಷಣಕಾರರಾಗಿ ಶ್ರೀಗೋಪಾಲ್ ಕುಲಕರ್ಣಿಯವರು ತಾವು ಸಿದ್ದರಾಗಿ ಬಂದಿಲ್ಲವೆನ್ನುತ್ತ, ಜೀವನದಲ್ಲಿ ಹಾಸ್ಯದ ಬಗ್ಗೆ ಹೇಳುತ್ತೇನೆಂದು ತಿಳಿಸಿ, ತಮ್ಮ ತಂದೆಯವರು ಕಲಾಕಾರರಾಗಿದ್ದು ಶಿಲ್ಪಿಯೆಂದು, ಕನ್ನಡದ ಸಾಹಿತ್ಯದ ಬಗ್ಗೆ ಇರುವ ಆಸಕ್ತಿಯಿಂದಾಗಿ ಹಾಸ್ಯಲೇಖನಗಳ ಮೂಲಕ ತಾವು ಸೇವೆ ಸಲ್ಲಿಸುತ್ತಿದ್ದೇನೆಂದು ತಿಳಿಸಿದರು. ನಂತರ ಬಾಷಣ ಹಾಸ್ಯಕ್ಕೆ ಸಂಬಂಧಪಟ್ಟಿರುವದರಿಂದ ಒಂದೆರಡು 'ಜೋಕ್' ಹೇಳುವನೆಂದು ಎಲ್ಲರುನ್ನು ನಗಿಸಿ ತಮ್ಮ ಬಾಷಣ ಮುಗುಸಿದರು. ಆತುರವಾಗಿದ್ದ ಅವರು ತಮ್ಮಗೆ ಗೊತ್ತಾಗಿದ್ದ ಪೂರ್ಣ ಅವದಿಯನ್ನು ಬಳಸಿಕೊಳ್ಳದೆ ನಾಲಕ್ಕು ನಿಮಿಷಕ್ಕೆ ತಮ್ಮ ಮಾತನ್ನು ಮೊಟಕುಗೊಳಿಸಿದರು.

ಮೂರನೆ ಭಾಷಣಕಾರರು.. ಪ್ರಸಾದ್ ಚೇರ್ಕಾಡಿ ಮಾತನಾಡುವುದು ನಾವು ಕಲಿಯುವುದು ಹೇಗೆ ಎನ್ನುತ್ತ ಹಿರಿಯರಿಂದ ಗುರುಗಳಿಂದ ಮತ್ತು ಇತಿಹಾಸದಿಂದ ಎಂದು ಪ್ರಾರಂಬಿಸಿದರು.ಹಿರಿಯರು ಕಿರಿಯರ ಕಲಿಕೆ ದಾರಿಯಾಗಿ ಹೇಗೆ ತಮ್ಮ ಹೃದಯ ವೈಶಾಲ್ಯ ಮೆರೆಯುವರೆಂದು ತಿಳಿಸಿದರು. ನಂತರ ಅವರು ಸಾಮಾಜಿಕ ಮನಸ್ಥಿಥಿಯನ್ನು ವಿಷೇಶಣೆ ಮಾಡುತ್ತ , ಹಿರಿಯರು ತಾವು ಸಾದಿಸಲಾದದ್ದನು ತಮ್ಮ ಗೊಂದಲಗಳನ್ನು ಕಿರಿಯರ ಮೂಲಕ ಸಾದಿಸಿ ಪರಿಹಾರ ಹುಡುಕುವ ಪ್ರಯತ್ನನಡೆಸುವರೆಂದು ತಿಳಿಸಿದ್ದು ನಿಜಕ್ಕು ಜೀವನದ ಗೊಂದಲಗಳಿಗೊಂದು ಹೊಸ ನೋಟ. ಹಾಗೆಯೆ ಅವರು ಹೊಸ ವಿಷಯಗಳಿಗೆ ಅವಿಷ್ಕಾರಗಳಿಗೆ ಯುವಜನೆತೆ ತೆರೆದುಕೊಳ್ಳುತ್ತಿರುವ ಬಗ್ಗೆ ಮತ್ತು ಹಿರಿಯರು ಅದರಲ್ಲಿ ಅಷ್ಟೆ ಸಂಭ್ರಮದಲ್ಲಿ ಪಾಲ್ಗೊಳ್ಳೂತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ದರು. ಬಾಷಣಕ್ಕೆ ಒಟ್ಟು ರೂಪದ ಕೊರತೆಯಿದ್ದರು ಅವರು ವಾಗ್ಝರಿ ನಿಜಕ್ಕು ಬಾಷಣವನ್ನು ಆಕರ್ಷಕವನ್ನಾಗಿಸಿತು.

ನಂತರ ಹರೀಶ್ ಆತ್ರೇಯರು ತಮ್ಮ  ಆಶುಭಾಷಣದ ಕಾರ್ಯಕ್ರಮ ನಿರೂಪಿಸಿದರು, ಆವರು ಕೊಟ್ಟಿದ್ದ ವಿಷಯ 'ಪತ್ರಿಕೋದ್ಯಮ ನೈಜ ಉದ್ದೇಶ ರ೦ಜನೆಯೇ ಅಥವಾ ಸತ್ಯದನಾವರಣವೇ?'. ತಮ್ಮ ಪ್ರಸ್ಥಾಪದಲ್ಲಿ ಅವರು ಪತ್ರಿಕೆಗಳು ನಿಜವಾದ ಸುದ್ದಿಯನ್ನು ಜನರಿಗೆ ತಲುಪಿಸುವ ತಮ್ಮ ಜವಾಬ್ದಾರಿಗಿಂತ ಅದನ್ನು ರಂಜನೀಯವೆನಿಸಿ , ತಮ್ಮ ಪತ್ರಿಕೆಯ ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಲು ಮಾತ್ರ ಪ್ರಯತ್ನಪಡುತ್ತವೆ ಎನ್ನುತ್ತ  ಆಯ್ದ ಐವರನ್ನು ಕರೆದರು.  ಎರಡು ನಿಮಿಶ ಅವದಿ ವಿಷಯವನ್ನು ಪೂರ್ತಿ ಪ್ರಸ್ಥಾಪ ಮಾಡಲು ಕೆಲವರಿಗೆ ತೊಡಕ್ಕಾಗಿದ್ದು ಕಂಡು ಬಂದಿತು.

 ಪ್ರಜ್ವಲ್ ರವರು ಪಾಶ್ಚಾತ್ಯ ಮಾದರಿಯ ಅನುಕರಣೆಯಿಂದ ಪತ್ರಿಕೆಗಳು ತಮ್ಮ ಸ್ವಂತಿಕೆ ಕಳೆದು ಕೊಳ್ಳುತ್ತಿವೆ ಇದು ದೇಶದ ಹಿತಕ್ಕೆ ಮಾರಕ ಎಂದರೆ, ಪ್ರಭುರವರು ಕೇವಲ ಸರ್ಕ್ಯುಲೇಶನ್ ಗಾಗಿ ಪತ್ರಿಕೆಗಳನ್ನು ಪೇಜ್ ನ್ಯೂಸ್ ಪೇಪರ್ ಮಾಡುವ ಧೋರಣೆ ಅಸಹನೀಯ ಎಂದರು,ಗೋಪೀನಾಥರಾಯರು ಮಿಲಿಟರಿ ವಿಷಯವನ್ನು ಪತ್ರಿಕೋದ್ಯಮದಕ್ಕೆ ಸಮೀಕರಿಸಿದರೆ, ರಘು ಎಸ್ ಪಿ  ಪೈಡ್ ಜರ್ನಲಿಸ೦ ಇ೦ದ ಪತ್ರಿಕೆಗಳಿಗೆ ಹಾನಿ ಭಟ್ಟರ ಟೀ೦ ಪತ್ರಿಕೆಯನ್ನು ಬಿಟ್ಟ್ಟಿ ಮತ್ತೊ೦ದು ಪತ್ರಿಕೆಗೆ ಜ೦ಪ್ ಆಗಿದ್ದು ಪಕ್ಷಾ೦ತರದ೦ತೆ ಎಂದರೆ ಮ೦ಜುನಾಥ ನೈಜ ಕಾಳಜಿ ಇರುವ ಪತ್ರಿಕೆಗಳ ಸರ್ಕ್ಯುಲೇಷನ್ ಎ೦ದಿಗೂ ಕಮ್ಮಿ ರ೦ಜನೆಯ ಜೊತೆಗೆ ಅಲ್ಪ ವಿಷಯವನ್ನ ಹೇಳುವ ಪತ್ರಿಕೆಗಳು ಈಗ ಚಾಲ್ತಿಯಲ್ಲಿವೆ ಎಂದು ತಿಳಿಸಿದರು.

ನಂತರ ಬಾಷಣಗಳ ವಿಮರ್ಷೆ
ಮೊದಲ ವಿಮರ್ಷಕರಾಗಿ ಪ್ರಭುರವರು , ಕಿರಣರವರ ಬಾಷಣ ವಿಮರ್ಷಿಸುತ್ತ 'ಕಿರಣ್ ರವರ ಬಾಷಣದಲ್ಲಿ ವಿಷಯವಿದೆ ಆದರೆ ಅದನ್ನು ಹೇಳುವ ರೀತಿಯನ್ನು ಉತ್ತಮ್ಮ ಪಡಿಸಿಕೊಳ್ಳಬಹುದ್ದಿತ್ತು ಎಂದರು. ಅಲ್ಲದ ದ್ವನಿಯ ಏರಿಳಿತ ವನ್ನು ಗಮನದಲ್ಲಿಸಿದರೆ ಕಿರಣ್ ಅತ್ಯುತ್ತಮ ಬಾಷಣಕಾರರಾಗುತ್ತಾರೆ ಎಂದರು
ನಂತರ ಎರಡನೆ ವಿಮರ್ಷಕಾರನಾಗಿ, ಪಾರ್ಥಸಾರಥಿ ಎಂದರೆ ನಾನು ಗೋಪಾಲ್ ಕುಲಕರ್ಣಿಯವರ ಬಾಷಣದ ವಿಮರ್ಷೆಯ ಜವಾಬ್ದಾರಿ ಹೊತ್ತು, ಗೋಪಾಲ್ ರವರ ಬಾಷಣದ ಸಹಜತೆ ಮತ್ತು ಬಾಷೆಯ ಸೊಗಡು ಚೆನ್ನಾಗಿದ್ದು ಅವರು ಮೊದಲೆ ಸಿದ್ದರಾಗಿ ಬಂದು ಪೂರ್ಣ ಸಮಯದ ಪ್ರಯೋಜನ ಪಡೆದು ನಿದಾನವಾಗಿ ಮಾತನಾಡಿದ್ದರೆ ಚೆನ್ನಾಗಿತ್ತು ಎಂದು ತಿಳಿಸಿದೆ.
ನಂತರ ಮೂರನೆಯ ವಿಮರ್ಷಕರಾಗಿ ರಾಮಮೋಹನ ರವರು ಪ್ರಸಾದರ ಬಾಷಣವನ್ನು ಪ್ರಸ್ಥಾಪ ಮಾಡುತ್ತ ಅವರಿಗೆ ಉತ್ತಮ್ಮ ಬಾಷಣಕಾರರಾಗುವ ಎಲ್ಲ ಅವಕಾಶಗಳು ಇದೆ ಎಂದು ತಿಳಿಸಿದರು.

ಕಡೆಯ ಬಾಷಣವಾಗಿ ವಿಶೇಷ ಭಾಷಣಕಾರರು ರಘುನ೦ದನ್ ಹಾಲೂರ್ ಇವರಿಂದ
ದಿನ ಬಳಕೆಯಲ್ಲಿ ಕನ್ನಡದ ಬಗ್ಗೆ ಇ೦ಗ್ಲೀಷ್ ಮಧ್ಯೆ ಕನ್ನಡ ಬೆರೆಸಿ ಮಾತನಾಡುವ ಕನ್ನಡಿಗರ ಮನಸ್ಥಿತಿ ಬಗ್ಗೆ ವಿವರಿಸಿದರು. ಹಲವು ಸಹಜ ಅಪಹಾಸ್ಯ ಸಂದರ್ಭಗಳನ್ನು ನಿರೂಪಿಸಿದ ಅವರು, ಅನಗತ್ಯವಾಗಿ ಇಂಗ್ಲೀಷ್  ಪದ ಬಳಸುವ ಹಕೀಕತ್ತೇನು?  ಎಂದು ಪ್ರಶ್ನಿಸಿದರು.ಈ ಥರದ್ದು ಕನ್ನಡವಲ್ಲದ ಕನ್ನಡ ಎನ್ನುವ ಅವರ ಮಾತು ಮನಮುಟ್ಟುವಂತಿತ್ತು.ಅಲ್ಲದೆ ಅವರು ಈ ರೀತಿ ಅನಗತ್ಯವಾಗಿ ಕನ್ನಡವನ್ನು ತಿರಸ್ಕಾರ ಭಾವದಿಂದ ನೋಡುವ ಕನ್ನಡಿಗರನ್ನು ಅವಹೇಳನ ಮಾಡುವ ಅವಕಾಶ ಸಿಕ್ಕಲ್ಲಿ ನಾನು ಅದನ್ನು ಎಂದಿಗು ಬಿಡಲಾರೆ ಸದುಪಯೋಗ ಮಾಡಿಕೊಳ್ಳುವೆ ಎಂದರು. ಮತ್ತೆ ನಮ್ಮ ಈ ರೀತಿ ಕನ್ನಡ ಪ್ರೇಮ ಸಭೆಗೆ ಮಾತ್ರ ಸೀಮಿತಮಾಡಿಕೊಳ್ಳದೆ ನಿತ್ಯ ಜೀವದ ಬಳಕೆಯಲ್ಲು ತರಬೇಕೆಂದು, ಸಾದ್ಯವಾದಷ್ಟು ಅಂಗ್ಲ ಪದಗಳ ಉಪಯೋಗವನ್ನು ಕಡಿಮೆಗೊಳಿಸುತ್ತ ಹೋಗಬೇಕೆಂದು ತಿಳಿಸಿ ಅದೆ ರೀತಿ ಪ್ರತಿಜ್ಞೆ ಸ್ವೀಕರಿಸುತ್ತೇನೆ ಎಂದರು.

ರಘುನ೦ದನ್ ಹಾಲೂರ್ ಇವರ ಕಿರುಪರಿಚಯ:
  ರಘುನಂದನ ಹಾಲೂರ್ ಅವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ನಿಕಟಪೂರ್ವ (೨೦೧೦ ಸಮಿತಿ) ಅಧ್ಯಕ್ಷರಾಗಿದ್ದವರು. ಅತ್ತ್ಯುತ್ತಮ ನಾಯಕತ್ವದ ಗುಣಗಳನ್ನು ಸಹಜವಾಗಿ ಹೊಂದಿರುವ ಅವರು, ಸಹಮನಸ್ಕರನ್ನು ಒಗ್ಗೂಡಿಸಿ, ತಾವೂ ಪರಿಶ್ರಮವಹಿಸಿ ಸಹಚರರನ್ನೂ ಪ್ರೇರೇಪಿಸಿ ಅಮೇರಿಕಾದಲ್ಲಿ ಕನ್ನಡ ಸಮುದಾಯಕ್ಕೆ ಒಳ್ಳೆಯ ಹೆಸರು ತಂದವರು. ಅಲ್ಲದೆ ಟಿ.ವಿ.ಯಲ್ಲಿ ಪ್ರಸಾರವಾದ "ಸಾಗರದಾಚೆ ಸಪ್ತಸ್ವರ" ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟು ಅನೇಕರಿಗೆ ಕಿರುತೆರೆಯ ಮೂಲಕ ಪರಿಚಿತರಾಗಿರುವರು. ೨೦೦೭, ೨೦೦೮ರಲ್ಲಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವಾರ್ಷಿಕಸಂಚಿಕೆ ಸ್ವರ್ಣಸೇತುವಿನ ಸಂಪಾದಕಸಮಿತಿಯಲ್ಲಿ ಸಾಹಿತ್ಯಿಕ ಸೇವೆಸಲ್ಲಿರುವರು.
ಇದೆಲ್ಲಕ್ಕಿಂತ ವಿಶೇಷವಾಗಿ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ಕಳೆದ ಸುಮಾರು ಮೂರು ವರುಷಗಳಿಂದ ನಡೆದು ಬರುತ್ತಿರುವ ವಾಕ್ಪಟುಗಳು ತಂಡವನ್ನು ಕಲ್ಪಿಸಿ, ಸ್ಥಾಪಿಸಿ ಅದರ ಮೂಲಕ ಅನೇಕರಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಿರುವರು. ವಾಕ್ಪಥದ ಹಿತೈಶಿಗಳು.
ಇವರು ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ಎಲ್ಲಾ ತರಹದ ಬೆಂಬಲ ನೀಡುತ್ತಾ ಈಗ ಬೆಂಗಳೂರಿನ ಅಂತಹ ಕೆಲವು ಸಂಸ್ಥೆಗಳಿಗೆ ಭೇಟಿಕೊಡಲು ಹಾಗೆ ತಮ್ಮ ತವರೂರಾದ ಚಿಕ್ಕಮಗಳೂರಿನಲ್ಲಿ ಕುಟುಂಬದವರೊಡನೆ ಇರಲು ಆಗಮಿಸಿದ್ದಾರೆ.

ನಂತರ ಹರೀಶ್ ರವರು ತಮ್ಮ ಸಮಯ ನಿರ್ವಹಣೆಯ ವಿವರಗಳನ್ನು ಸಭಿಕರಿಗೆ ತಿಳಿಸಿದರು. ಮಂಜುರವರು  ಸಭೆಯ ವ್ಯಾಕರಣಶುದ್ದಿಯ ಬಗ್ಗೆ ತಿಳಿಸುತ್ತ, ಎಲ್ಲರು ಕೆಲವು ಅಂಗ್ಲ ಪದಗಳನ್ನು ಉಪಯೋಗ ಮಾಡಿದರು ಅನ್ನುವದನ್ನು ಹೊರತುಪಡಿಸಿದರೆ, ಕನ್ನಡ ಮಾತನಾಡುವಾಗ ತಪ್ಪು ಮಾಡಲಿಲ್ಲವೆಂದು ತಿಳಿಸಿ ಎಲ್ಲರ ಬೆನ್ನು ತಟ್ಟಿದರು.

ಮುಂದಿನ ಗೋಷ್ಠಿಯ ರೂಪರೇಖೆಗಳ ಬಗ್ಗೆ ಚರ್ಚೆಯೊಂದಿಗೆ ಗೋಷ್ಠಿಯು ಮುಕ್ತಾಯಕ್ಕೆ ಬಂದಿತು.ಎಲ್ಲರು ಪರಸ್ಪರ ವಿದಾಯ ಹೇಳುತ್ತ ಮುಂದಿನ ಗೋಷ್ಥಿಯ ಬಗ್ಗೆ ಚಿಂತಿಸುತ್ತ ಹೊರಗೆ ಬಂದರೆ ಯಥಾಪ್ರಕಾರ ಮೋಡ ತುಂಬಿದ ವಾತವರಣ.

Friday, 15 July 2011

ಭಾಷಣ ಕಲೆ ಮತ್ತು ವಾಕ್ಪಥ ೧

ಅತ್ಯಂತ ಜನಪ್ರಿಯ ಸಿನೇಮಾ ಹೀರೋ ಹೃತ್ತಿಕ್ ರೋಷನ್ ಗೆ  ಬಹಳ ದೊಡ್ಡ  ವೀಕ್ ನೆಸ್ ಯಾವುದು ಗೊತ್ತೇ   : ಉಗ್ಗುವಿಕೆ

ನಿಮಗೆ ಗೊತ್ತೆ ? ಹಳೆಯ ನಾಣ್ಣುಡಿ ಹೇಳುತ್ತೆ ಜನರು ಭಾಷಣ ಮಾಡಲು ಅಂಜುವಷ್ಟು ಸಾಯಲು ಸಹಾ ಅಂಜಲ್ಲವಂತೆ. ಈ ಹೆದರಿಕೆ ನಮ್ಮಲ್ಲಿ ಹಲವಾರು ಬಾರಿ ಕೆಲವು ಪ್ರತಿಕ್ರಿಯೆಗಳನ್ನು ಉಂಟು ಮಾಡುತ್ತವೆ, ನಾವು ನಮಗರಿವಿಲ್ಲದಂತೆಯೇ ಉಗ್ಗುವುದು, ಇದಿರಿಗೆ ಬಾಗುವುದು, ಬಟ್ಟೆ ಆಗಾಗೆ ಸರಿಪಡಿಸಿಕೊಳ್ಳುವುದು, "ಅಂ" ಆ ಮುಂತಾದ ಅನವಶ್ಯಕ ಉದ್ಗಾರಗಳನ್ನು ತೆಗೆಯುವುದು, ಕೈಗಳನ್ನು ಬೆನ್ನ ಹಿಂದೆ ಮುಖದ ಮೇಲೆ ತರುವುದು, ಅಥವಾ ಹೇಳಬೇಕಾದುದನ್ನು ಮರೆತು ಬಿಡುವುದು ಮುಂತಾದ ಆನೈಚ್ಛಿಕ ಕ್ರೀಯೆಗಳನ್ನು ಮಾಡುತ್ತಿರುತ್ತೇವೆ. ಇವುಗಳು ನಮ್ಮ ಬೆರಳಚ್ಚಿನಂತೆ ಅವರವರಿಗನುಗುಣವಾಗಿರುತ್ತವೆ. ಇವುಗಳು ಯಾಕೆ ಆಗುತ್ತಿರುತ್ತವೆ..?  ಇವುಗಳನ್ನು ಹೇಗೆ ಸರಿಪಡಿಸಬಹುದು..? ಮುಂತಾದ ಅನೇಕ ವಿಷಯಗಳನ್ನು ಕಲಿತು ಕೊಳ್ಳುವುದೇ ವಾಕ್ಪಥದ ಮೊದಲ ಧ್ಯೇಯ.
ಉದ್ಧೇಶ
೧. ಪಥಿಕರಿಗೆ ತಮ್ಮ ತಮ್ಮ ಕುಂದು ಕೊರತೆಗಳನ್ನು ಮನದಟ್ಟು ಮಾಡುವುದು.
೨. ತಮ್ಮಲ್ಲಿನ ಉತ್ತಮ ಅಭ್ಯಾಸ, ಗುಣ ಮತ್ತು ವಿಶೇಷತೆಗಳನ್ನು ಗುರುತಿಸಿ ಬೆಳೆಸುವುದು.
೩. ತಮ್ಮಲ್ಲಿನ ಕುಂದುಕೊರತೆಗಳನ್ನು ನಿವಾರಿಸಿಕೊಂಡು ಉತ್ತಮ ಅಂಶ, ಅಭ್ಯಾಸಗಳನ್ನು ಹೆಚ್ಚಿಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳುವುದು.
೪. ಉತ್ತಮ ಭಾಷಣಕಾರರನ್ನು ಪರಿಚಯಿಸುತ್ತ ಅವರಿಂದ ಹೊಸ ಹೊಸ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಗೆ ಪ್ರದರ್ಶಿಸಬಹುದೆಂಬುದನ್ನು ತಿಳಿದುಕೊಳ್ಳುವುದು.
೫. ಸಮಯ ಪರಿಪಾಲನೆ.
೬. ಯೋಜನಾಬದ್ಧ , ಸಂಚಾಲನಾ ಕ್ರಮದ ಮುಂದಾಳತ್ವದ ಕಲಿಕೆ

ಕೆಲವು ಮುಖ್ಯ ಕೊರತೆಗಳು ಮತ್ತು ಅವುಗಳನ್ನು ನಿಭಾಯಿಸುವ ವಿಧಾನ:

೧.    ಕೊರತೆ  :    ಆತ್ಮ ವಿಶ್ವಾಸದ ಕೊರತೆ
      ನಿವಾರಣೆ  :  ನಾನು ಇದನ್ನು ನಿವಾರಿಸಿಕೊಳ್ಳಬಲ್ಲೆ ಎಂದು ತಾನೇ ಸತತ ಮನದಟ್ಟು ಮಾಡಿಕೊಳ್ಳುವುದು    
      ಪಲಿತಾಂಶ : ಒಳ್ಳೆಯ ಪ್ರಭಾವಶಾಲೀ ಭಾಷಣ
೨.    ಕೊರತೆ  :    ಸ್ವಲ್ಪ ಸಭಾ ಕಂಪನ
      ನಿವಾರಣೆ  :  ಸತತ ಅಭ್ಯಾಸ
      ಪಲಿತಾಂಶ : ಒಳ್ಳೆಯ ಪ್ರಭಾವಶಾಲೀ ಭಾಷಣ
೩.    ಕೊರತೆ  :    ನಿಂತಲ್ಲಿ ನಿಲ್ಲದೇ ಹಿಂದೆ ಮುಂದೆ ಚಲಿಸುವುದು, ಇದಿರಿಗೆ ಸಭಿಕರನ್ನು ನೋಡದೇ ನೆಲವನ್ನು ನೋಡುವುದು.
      ನಿವಾರಣೆ  :  ಎರಡೂ ಕಾಲಲ್ಲಿ ಗಟ್ಟಿಯಾಗಿ ಒಂದು ಕಡೆ ನಿಂತು ಮಾತನಾಡುವ ಕಲೆ ರೂಢಿಸಿಕೊಳ್ಳುವುದು.ಸಭಿಕರ ಪ್ರತಿಯೋರ್ವರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮಾತನಾಡುವುದು.ಕೊರತೆಗಳನ್ನು  ನಿವಾರಿಸಿಕೊಳ್ಳುವ ಬಗ್ಗೆ ಕಲಿಕೆ, ಮನನ.
      ಪಲಿತಾಂಶ :ಉತ್ತಮ  ಹಾವ ಭಾವವುಳ್ಳ ಭಾಷಣ ಪ್ರದರ್ಶನ.
೪.    ಕೊರತೆ  :    ವೇಗದ ಮಾತು, ಮಧ್ಯೆ ಮಧ್ಯೆ "ಅ" ಉಧ್ಗಾರ,ಅಥವಾ ಯಾವುದಾದರೂ ಒಂದು ವಸ್ತುವಿನೊಡನೆ ಆಟ ( ಉದಾಹರಣೆಗೆ ತಲೆ   ಕೂದಲು, ಪೆನ್ ಮುಂತಾದವುಗಳು)
      ನಿವಾರಣೆ  :  ನಾನು ನಿಧಾನವಾಗಿ ಎಲ್ಲರಿಗೂ ತಿಳಿಯುವ ಹಾಗೆ ಮಾತನಾಡುತ್ತೇನೆ, ಮಧ್ಯೆ ನಾನು ಯಾವುದೇ ಉಧ್ಗಾರವನ್ನೂ ತೆಗೆಯುವುದಿಲ್ಲ, ನನ್ನ ಕೈಗಳನ್ನು ಕುತ್ತಿಗೆ ಮತ್ತು ಸೊಂಟದ ಮಧ್ಯೆ ಮಾತ್ರ ಒಟ್ಟಾಗಿರಿಸಿಕೊಳ್ಳುತ್ತೇನೆ, ಎಂದುಕೊಳ್ಳುವುದು ಮತ್ತು ಮನನ ಅದನ್ನೇ ಮಾಡುವುದು
      ಪಲಿತಾಂಶ : ಸತತ ಅಭ್ಯಾಸದಿಂದ ಉತ್ತಮ ಬದಲಾವಣೆ.
೫.    ಕೊರತೆ  :    ಬರೆದು ತಂದು ಓದುವುದು.
      ನಿವಾರಣೆ  :  ಮೊದ ಮೊದಲು ಎಲ್ಲವನ್ನೂ ಬರೆದು ತರದೇ , ಕಡಿಮೆ ಬರೆದು ತರುವುದು, ಸತತ ಅಭ್ಯಾಸ ಮತ್ತು ಮನನ
      ಪಲಿತಾಂಶ : ವಿಷಯಗಳ ತಲೆ ಬರಹಗಳ ಅಡಿ ಟಿಪ್ಪಣಿ ಬರೆದಿಟ್ಟುಕೊಂಡು ಅದನ್ನು ಆತ್ಮ ವಿಶ್ವಾಸದಿಂದ ಭಾಷಣ ಮಾಡುವುದು.

ವಾಕ್ಪಥದ ೫ನೆ ಹೆಜ್ಜೆಯು,೧೭/೦೭/೨೦೧೧ ,ಭಾನುವಾರ ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ
ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.
ಕಾರ್ಯಕ್ರಮದ ವಿವರ:
ಗೋಷ್ಠಿಯ ನಿರ್ವಹಣೆ:  ಶ್ರೀಸುನೀಲ ದಾಸಪ್ಪನವರ
ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೦-೧೫ಕ್ಕೆ
ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಇತ್ಯಾದಿಗಳನ್ನು ಸುನೀಲ ದಾಸಪ್ಪನವರ ತಿಳಿಸುತ್ತಾರೆ.
ಭಾಷಣಗಳು:
ವಾಕ್ಪಥಿಕರು ತಮ್ಮ ಭಾಷಣವನ್ನು ಆರ೦ಭಿಸುವ ಮುನ್ನ ಅವರ ಪರಿಚಯವನ್ನು ಸುನೀಲ ಮಾಡಲಿದ್ದಾರೆ.  ಪ್ರತಿ ಭಾಷಣಕಾರರಿಗೆ ಆರು ನಿಮಿಷಗಳ ಸಮಯವಿರುತ್ತದೆ.  ತಮ್ಮ ಭಾಷಣದ ವಿಷಯವನ್ನು ಸಭಾಕ೦ಪನವನ್ನು ನಿವಾರಿಸಿಕೊ೦ಡು, ಆತ್ಮವಿಶ್ವಾಸದಿ೦ದ, ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಮ೦ಡಿಸುವುದು, ತನ್ಮೂಲಕವಾಕ್ಪಥಿಕರು ತಮ್ಮ ವಿಷಯ ಮ೦ಡನಾ ಹಾಗೂ ಭಾಷಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ನೆರವಾಗುವುದು ಈ ಗೋಷ್ಠಿಯ  ಮುಖ್ಯ ಉದ್ಧೇಶ.
ಮೊದಲನೆಯ ಭಾಷಣ: ಶ್ರೀ ಕಿರಣಕುಮಾರ
ಎರಡನೆಯ ಭಾಷಣ:  ಶ್ರೀ ಧ್ರುವ ಹೆಗ್ದೆ
ಮೂರನೆಯ ಭಾಷಣ:  ಶ್ರೀ ಗೋಪಾಲ ಕುಲಕರ್ಣಿ
ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.
ಮೊದಲನೆಯ ಭಾಷಣದ ವಿಮರ್ಶೆ: ಶ್ರೀ ಪ್ರಸನ್ನ ಕುಲಕರ್ಣಿ
ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪಾರ್ಥಸಾರಥಿ
ಮೂರನೆಯ ಭಾಷಣದ ವಿಮರ್ಶೆ:   ಶ್ರೀ ರಾಮಮೋಹನ.
ವಿಶೇಷ ಭಾಷಣ:   ಶ್ರೀ ರಘುನಂದನ ಹಾಲೂರ್

Saturday, 9 July 2011

ವಾಕ್ಪಥ - ೫ನೆ ಹೆಜ್ಜೆ.

ವಾಕ್ಪಥದ ನಾಲ್ಕನೆಯ ಹೆಜ್ಜೆಯು,೧೭/೦೭/೨೦೧೧ ,ಭಾನುವಾರ ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.
ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.
ಕಾರ್ಯಕ್ರಮದ ವಿವರ:
ಗೋಷ್ಠಿಯ ನಿರ್ವಹಣೆ: ಸುನೀಲ ದಾಸಪ್ಪನವರ
ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೦-೧೫ಕ್ಕೆ
ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಇತ್ಯಾದಿಗಳನ್ನು ಸುನೀಲ ದಾಸಪ್ಪನವರ ತಿಳಿಸುತ್ತಾರೆ.
ಭಾಷಣಗಳು:
ವಾಕ್ಪಥಿಕರು ತಮ್ಮ ಭಾಷಣವನ್ನು ಆರ೦ಭಿಸುವ ಮುನ್ನ ಅವರ ಪರಿಚಯವನ್ನು ಸುನೀಲ ಮಾಡಲಿದ್ದಾರೆ.  ಪ್ರತಿ ಭಾಷಣಕಾರರಿಗೆ ಆರು ನಿಮಿಷಗಳ ಸಮಯವಿರುತ್ತದೆ.  ತಮ್ಮ ಭಾಷಣದ ವಿಷಯವನ್ನು ಸಭಾಕ೦ಪನವನ್ನು ನಿವಾರಿಸಿಕೊ೦ಡು, ಆತ್ಮವಿಶ್ವಾಸದಿ೦ದ, ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಮ೦ಡಿಸುವುದು, ತನ್ಮೂಲಕ ವಾಕ್ಪಥಿಕರು ತಮ್ಮ ವಿಷಯ ಮ೦ಡನಾ ಹಾಗೂ ಭಾಷಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ನೆರವಾಗುವುದು ಈ ಗೋಷ್ಠಿಯ  ಮುಖ್ಯ ಉದ್ಧೇಶ.
ಮೊದಲನೆಯ ಭಾಷಣ: ಶ್ರೀ ಕಿರಣಕುಮಾರ

ಎರಡನೆಯ ಭಾಷಣ:  ಶ್ರೀ ಧ್ರುವ ಹೆಗ್ದೆ
ಮೂರನೆಯ ಭಾಷಣ: ಗೋಪಾಲ ಕುಲಕರ್ಣಿ
ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.
ಮೊದಲನೆಯ ಭಾಷಣದ ವಿಮರ್ಶೆ: ಶ್ರೀ ಪ್ರಸನ್ನ ಕುಲಕರ್ಣಿ
ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪಾರ್ಥಸಾರಥಿ
ಮೂರನೆಯ ಭಾಷಣದ ವಿಮರ್ಶೆ:   ಶ್ರೀ ರಾಮಮೋಹನ.
ವಿಶೇಷ ಭಾಷಣ:  ಶ್ರೀ ರಘುನಂದನ ಹಾಲೂರ್


ಈ ಗೋಷ್ಠಿಯ ಸಮಯಪಾಲಕರಾಗಿ ಶ್ರೀ ಹರೀಶ ಆತ್ರೇಯ ಕಾರ್ಯ ನಿರ್ವಹಿಸಲಿದ್ದಾರೆ.
ವ್ಯಾಕರಣ ಶುದ್ಧಿ ಕಾರ್ಯವನ್ನು ಶ್ರೀ  ಹೊಳೆನರಸಿಪುರ ಮ೦ಜುನಾಥ. ನಿರ್ವಹಿಸಲಿದ್ದಾರೆ.
ನ೦ತರದಲ್ಲಿ ಆಶುಭಾಷಣ ಕಾರ್ಯಕ್ರಮ, ನಿರ್ವಹಣೆ ಶ್ರೀ  ಹರೀಶ ಆತ್ರೇಯ . ಅವರಿ೦ದ.
ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ೨ ನಿಮಿಷಗಳ ಕಾಲಾವಕಾಶವಿರುತ್ತದೆ, ಅಲ್ಲಿಯೇ ನೀಡಿದ ಯಾವುದಾದರೂ ಒ೦ದು ವಿಚಾರದ ಬಗ್ಗೆ ಯೋಚಿಸಿ ಭಾಷಣ ಮಾಡಬೇಕಾಗಿರುತ್ತದೆ.  ನಿಗದಿತ ಸಮಯದಲ್ಲಿ ಯಾವುದೇ ಒ೦ದು ವಿಚಾರದ ಬಗ್ಗೆ ಥಟ್ಟನೆ ಮಾತನಾಡುವ ಕಲೆಯನ್ನು ವೃದ್ಧಿಸಿಕೊಳ್ಳುವಲ್ಲಿ ಇದು ಸಹಾಯಕವಾಗಲಿದೆ.
ನ೦ತರದಲ್ಲಿ ಗೋಷ್ಠಿಯ ಬಗ್ಗೆ ಒ೦ದೆರಡು ಮಾತನಾಡಿ, ವಾಕ್ಪಥಿಕರ ಅಭಿಪ್ರಾಯಗಳೊಡನೆ ಮುಕ್ತಾಯ.
ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.
ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ನಿಮ್ಮ ಬರುವಿಕೆಯನ್ನು ಎದುರು ನೋಡುವ -
ವಾಕ್ಪಥ ತ೦ಡ.
ದಯವಿಟ್ಟು ಗಮನಿಸಿ:  ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ.