ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Monday, 13 June 2011

ವಾಕ್ಪಥ ಹೆಜ್ಜೆ ೪ ಒಂದು ಸುಂದರ ಸಫಲ ರವಿವಾರ

ವಾಕ್ಪಥ ಹೆಜ್ಜೆ ೪ ಒಂದು ಸುಂದರ ಸಫಲ ರವಿವಾರ

ಈ ಸಾರಿಯ ವಾಕ್ಪಥದ ಹೊಣೆಗಾರಿಕೆ ನಮ್ಮೆಲ್ಲರ ನೆಚ್ಚಿನ ಗಂಭೀರ ಕಂಠದ ಅಷ್ಟೇ ಗಾಂಭೀರ್ಯದ ತೂಕದವರಾದ ಹೊಳೆನರಸೀಪುರ ಮಂಜುನಾಥ ಅವರ ಮಧ್ಯಸ್ತಿಕೆಯಲ್ಲಿ ಪರಿಪೂರ್ಣತೆಯ ಕಡೆಗಿನ ತನ್ನ ನಾಲ್ಕನೆಯ ಹೆಜ್ಜೆಯನ್ನಿಟ್ಟಿತು.
ಈ ಸಾರಿಯೂ ಮಂಜುರವರು ತಮ್ಮ ಗಂಭೀರ ಕಂಠದಲ್ಲಿ ವಾಕ್ಪಥದ ಮೂಲ ರೂಪುರೇಶೆಗಳನ್ನು ವಿವರಿಸಿ  ಇಂದಿನ ದಿನದ ಕಾರ್ಯಕ್ರಮದ ವಿಶೇಷಗಳನ್ನು ಅರುಹುತ್ತಾ ಶುಭಾರಂಭ ಮಾಡಿದರು.


ಇವತ್ತಿನ ಭಾಷಣಕಾರರು ಜಯಂತ್ ರಾಮಾಚಾರ್, ರಾಮ ಮೋಹನ್ ಮತ್ತು ಸುನಿಲ್ ದಾಸಪ್ಪನವರು

ಜಯಂತ್ ತಮ್ಮ ಭಾಷಣದಲ್ಲಿ ತನ್ನ ವ್ಯಕ್ತಿತ್ವ ರೂಪುಗೊಳ್ಳಲು ತಂದೆ ತಾಯಿಯವರ ತ್ಯಾಗದ ಬಗ್ಗೆ ಹೇಳುತ್ತಾ ಭಾವ ವಿಹ್ವಲರಾದರು. ಅವರು ಪ್ರತಿ ಮಾತು ತನ್ನ ಗತ ಕಾಲದಲ್ಲಿದ್ದು ಬಂದ ಹಾಗಿತ್ತು. ಜಯಂತ್ ಭಾಷಣ ಮಾಡುವಾಗ ತಮ್ಮ ದೃಷ್ಟಿಯನ್ನು ನೆರೆದ ಪ್ರೇಕ್ಷಕರೆಲ್ಲರ ಕಡೆ ಹರಿಸಿದ್ದರೆ ಇನ್ನೂ ಮಹತ್ವ ಬರುತ್ತಿತ್ತು. ಸುಲಲಿತವಾಗಿ ಮಾಡಿದ್ದರೂ ಎಲ್ಲೋ ಒಂದುಕಡೆ ಇನ್ನೂ ಸ್ವರ ಮತ್ತು ಭಾವವನ್ನು ಪರಿಶುದ್ಧಗೊಳಿಸಬಹುದಿತ್ತೆನ್ನಿಸಿತು. ಸೀಮಿತ ಅವಧಿಯಲ್ಲಿ ಭಾಷಣವನ್ನು ಮುಗಿಸಲು ಪ್ರಯತ್ನಿಸಬೇಕಿತ್ತು ಜಯಂತ್ ಎಂಟು ನಿಮಿಷ ಮುವತ್ತಾರು ಸೆಕೆಂಡ್ ತೆಗೆದುಕೊಂಡಿದ್ದರು.ಭಾಷೆಯ ಮೇಲಿನ ಹಿಡಿತ ಪರವಾಗಿಲ್ಲ.

ಎರಡನೆಯವರು ರಾಮ ಮೋಹನ್  ಭಾಷೆಯ ಬಳಕೆ ಚೆನ್ನಾಗಿತ್ತು , ವಿಷಯ ಸಂಗ್ರಹಣೆ ಚೆನ್ನಾಗಿದೆ ನಿರರ್ಗಳವಾಗಿ ಭಾಷಣ ಮಾಡಿದರೂ ಸಮಯ ಪಾಲನೆಗೆ ಸಾಕಷ್ಟು ಒತ್ತು ಕೊಡಬೇಕಾಗಿದೆ. ಇವರು ಭಾಷಣ ಕೊನೆಗೊಳಿಸುವಾಗ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡು ಬಂತು.ಇವರಿಗೆ ಶಬ್ದಗಳನ್ನು ಸುಲಲಿತವಾಗಿ ಉಪಯೋಗಿಸುವ ಜಾಣ್ಮೆ ತಿಳಿದಿದೆ.ಇವರು ಒಂಬತ್ತು ನಿಮಿಷ ಇಪ್ಪತ್ಮೂರು ಸೆಕುಂಡು ತೆಗೆದು ಕೊಂಡರು.
 

ಮೂರನೆಯವರು ಸುನಿಲ್ ದಾಸಪ್ಪನವರು ತಮ್ಮ ವಿಷಯವನ್ನು ತೆಗೆದುಕೊಂಡ ಸುನಿಲ್ ನಿರರ್ಗಳವಾಗಿ ಮಾತನಾಡುತ್ತಿದ್ದರು, ವಿಷಯ ಸಂಗ್ರಹಣೆ ಚೆನ್ನಾಗಿದೆ, ಆದರೆ ಅದರಿಂದಾಗಿ ವಿಷಯವನ್ನು ಕಡಿಮೆ ಅವಧಿಯಲ್ಲಿ ಜಾಸ್ತಿ ಹೇಳಬೇಕೆನ್ನುವ ಆತುರ ಕಂಡಿತು, ಆಸಕ್ತಿಕರವಾಗಿ ಸ್ವರ ಭಾವ ಸಹಿತವಾಗಿ ಹೇಳಬಲ್ಲರಾದರೂ ಸಮಯದ ಕ್ಲಪ್ತತೆ ಕಲಿಯ ಬೇಕಿದೆ.ಅಭಿರುಚಿ ಚೆನ್ನಾಗಿದೆ , ಶಬ್ದಗಳನ್ನು ಅನುಕ್ರಮಣಿಸುವುದನ್ನು ಕಡಿಮೆ ಮಾಡಿದರೆ ಒಳಿತು.ಇವರು ಎಂಟು ನಿಮಿಷ ಇಪ್ಪತ್ತೆಂಟು ಸೆಕುಂಡು ತೆಗೆದುಕೊಂಡರು.

ಮಂಜು ಅವರು ಭಾಷಣಕಾರರ ಪರಿಚಯ ಮಾಡಿದ್ದು ಕಡಿಮೆಯಾಯ್ತು ಅನ್ನಿಸುತ್ತಿತ್ತು.ಇನ್ನು ಪ್ರತಿ ವಾಕ್ಪಥದ ಹೆಜ್ಜೆ ಆರಂಭಗೊಳ್ಳುವಾಗ ಗುರಿ ಧ್ಯೇಯ ಮತ್ತು ಅವಶ್ಯಕ ನಿಯಮಾವಳಿಗಳನ್ನು ಪರಿಚಯ ಮಾಡಿಕೊಟ್ಟಲ್ಲಿ ಹೊಸಬರ ಗಲಿಬಿಲಿ ಕಡಿಮೆ ಮಾಡಬಹುದಾಗಿದೆ.
 

ಈ ಸಾರಿಯ ಅಶು ಭಾಷಣದ ಹೊಣೆಗಾರಿಕೆ ರಘು ಅವರದ್ದಾಗಿದ್ದು ಅದನ್ನು ಅವರು ಸಮರ್ಪಕವಾಗಿ ನಿರ್ವಹಿಸಿದ್ದರು. ಪ್ರಚಲಿತ ವಿಧ್ಯಮಾನದ ವಿಷಯವನ್ನೇ ಆರಿಸಿ ಎಲ್ಲರಿಗೂ ಒಂದೇ ವಿಷಯವನ್ನು ಕೊಟ್ಟರಾದರೂ ಪ್ರತಿಯೊಬ್ಬರ ಚಿಂತನೆಗಳನ್ನು ಅವರವರ ಭಾಷಣದೊಂದಿಗೆ ಹೃಸ್ವವಾಗಿ ಎತ್ತಿದ್ದು ಸಮತೋಲನ ಮೂಡಿಸುವಲ್ಲಿ ಸಹಕಾರಿಯಾಗಿಸುತ್ತ ಒಳ್ಳೆಯ ಮಂಥನ ಕಾರ್ಯಕ್ರಮವಾಗಿತ್ತು.ಅವರು ಆರಿಸಿದ ವಿಷಯ ಪ್ರಸ್ತುತಕ್ಕೆ ಅವಶ್ಯಕವಾವುದು ಹಸುರಿನ ಕ್ರಾಂತಿಯೇ ಅಥವಾ ಕೈಗಾರಿಕಾ ಕ್ರಾಂತಿಯೇ ಎಂಬುದು. ಇದಕ್ಕೆ ಗೋಪೀನಾಥರು, ಪ್ರಸನ್ನ ಕುಲಕರ್ಣಿ ಮತ್ತು ಕಿರಣ್ ( ಆತ್ರೇಯರ ಸಹವರ್ತಿ) ಹಸುರು ಕ್ರಾಂತಿಗೆ ಒತ್ತು ಕೊಟ್ಟರೆ ಮಂಜುರವರು ಎರಡರ ಅಗತ್ಯತೆಯನ್ನೂ ಪ್ರತಿಪಾದಿಸಿದ್ದರು.

ಈ ಸಾರಿಯ ವಾಕ್ಪಥದಲ್ಲಿ ವಿಷೇಷ ಭಾಷಣವನ್ನು ಸೃಷ್ಟಿವೆಂಚರ್ಸ್ ನ ಶ್ರೀಯುತ ನಾಗರಾಜರು ಅತ್ಯಂತ ಸಮರ್ಪಕ ರೀತಿಯಲ್ಲಿ ಸಂಘಟನೆಯ ಮಹತ್ವ ಮತ್ತು ಬದ್ಧತೆಯ ಬಗೆಗೆ ವಿವರಿಸಿದರು. ಅವರು ಆಯ್ಕೆ ಮಾಡಿದ ವಿಷಯ ಸಂಘಟನೆ ಸಂಸ್ಕೃತಿ ಮತ್ತು ಸಂಪನ್ಮೂಲ ದ ಅವಿಭಕ್ತ ಸಮ್ಮಿಳಿತ ಸಂಬಂಧದ ಬಗೆಗಾಗಿತ್ತು. ಆದರೆ ನಮ್ಮ ಈ ವಾಕ್ಪಥದ ಉದ್ದೇಶಕ್ಕೂ ಅವರು ನಿರರ್ಗಳವಾಗಿ ವಿವರಿಸಿದ ವಿಷಯಕ್ಕೂ ನನಗೆ ತಾಳೆ ಹಾಕಲಾಗಲಿಲ್ಲ. ಅವರು ಒಳ್ಳೆಯ ಭಾಷಣಕಾರರೆಂಬುದರಲ್ಲಿ ಎರಡು ಮಾತಿಲ್ಲ. ಸಭಿಕರನ್ನು ಆಕರ್ಷಿಸೋ ಕಲೆ ಚೆನ್ನಾಗಿ ತಿಳಿದಿದೆ ಅನ್ನಿಸಿತು, ಎಲ್ಲದಕ್ಕಿಂತ ಹೆಚ್ಚಾಗಿ  ಈ ವಿಷಯವೇ ವಾಕ್ಪಥಕ್ಕೆ ನೇರವಾಗಿ ಸಂಬಂದಿಸಿತ್ತು.

ವಾಕ್ಪಥದ ಈ ದಿನದ ಕಾರ್ಯಕ್ರಮದ ಸಮಾಪ್ತಿಯನ್ನು ಅಧಿಕ್ರತವಾಗಿ ಮಂಜುನಾಥ ಅವರು  ಘೋಷಿಸುತ್ತಿದ್ದಂತೆ ಮುಂದಿನ ಕಾರ್ಯಕ್ರಮದ ರೂಪು ರೇಶೆಯ ಬಗ್ಗೆ ಒಂದು ಸಭೆ ನಡೆಯಿತು. ಮುಂದಿನ ವಾಕ್ಪಥದ ಹೆಜ್ಜೆ ಎಂದಿನಂತೆ ಇನ್ನೂ ನವೀನ ವಿಷಯ, ಆಧ್ಯತೆಯನ್ನು ಒಳಗೊಂಡು ಹೊಸ ಹೊಣೆಗಾರರಾದ ಸುನಿಲ್ ದಾಸಪ್ಪನವರ ನೇತ್ರತ್ವದಲ್ಲಿ ನಡೆಯಲಿದೆ. ಶ್ರೀಯುತ ಪ್ರಭು ಅವರ ಮೂಲ ಆಶಯದಂತೆ ಹೊಣೆಗಾರಿಕೆ , ಮುಂದಾಳತ್ವ ಮತ್ತು ಪರಿಕಲ್ಪನೆಯ ಪ್ರದರ್ಶನಾ ಕಲೆಯ ಅಭಿವ್ಯಕ್ತ ಮಾಧ್ಯಮವೆನ್ನಿಸಿ ಮುಂದುವರಿಯಲಿ, ಇನ್ನೂ ಇನ್ನೂ ಹೆಚ್ಚು ಹೆಚ್ಚು ವಾಕ್ಪಥಿಕನ್ನೊಳಗೊಂಡು ಹೆದ್ದಾರಿಯಾಗಲಿ ಎಂಬುದೇ ಎಲ್ಲರ ಆಶಯ

No comments:

Post a Comment