ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday 23 March, 2012

ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಉದಯಕಾಲದಿ ಎದ್ದು ಅಂಗಳವ ಸಾರಿಸಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವ ಬಿಡಿಸಿ ಹೊಸ ಚಿಗುರಿನ ಮಾವಿನ ತೋರಣವ ಕಟ್ಟಿ ಸಂಭ್ರಮದಿ ಬರಮಾಡಿಕೊಳ್ಳೋಣ ಯುಗಾದಿಯ ಕಷ್ಟಗಳೆಂಬ ಬೇವಿಗೆ ಸುಖವೆಂಬ ಬೆಲ್ಲವ ಸೇರಿಸಿ ಮುಂಬರುವ ಕಾಲದಿ ಬೆಲ್ಲದ ಸವಿಯು ಹೆಚ್ಚಾಗಿ ಬೇವಿನ ಕಹಿಯು ಮರೆಯಾಗಿ ಸುಖ ಸಂತೋಷ ತುಂಬಲೆಂದು ಬಾಳಲಿ ಹರಸೋಣ, ಪ್ರಾರ್ಥಿಸೋಣ ಖರ ನಾಮ ಸಂವತ್ಸರದ ಕಹಿಯನ್ನೆಲ್ಲಾ ಮರೆತು ನಂದನ ನಾಮ ಸಂವತ್ಸರದಿ ನಲಿ ನಲಿದಾಡುತ ದ್ವೇಷ ಹಗೆತನವ ಎಲ್ಲವನ್ನು ಮರೆತು ಸ್ನೇಹಸೌಹಾರ್ದವ ಮೆರೆದು ಎಲ್ಲರಲೂ ಒಂದಾಗೋಣ... ಸರ್ವರಿಗೂ ನೂತನ ಸಂವತ್ಸರದ / ಯುಗಾದಿಯ/ ಹೊಸ ವರ್ಷದ ಶುಭಾಶಯಗಳುಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಉದಯಕಾಲದಿ ಎದ್ದು ಅಂಗಳವ ಸಾರಿಸಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವ ಬಿಡಿಸಿ ಹೊಸ ಚಿಗುರಿನ ಮಾವಿನ ತೋರಣವ ಕಟ್ಟಿ ಸಂಭ್ರಮದಿ ಬರಮಾಡಿಕೊಳ್ಳೋಣ ಯುಗಾದಿಯ ಕಷ್ಟಗಳೆಂಬ ಬೇವಿಗೆ ಸುಖವೆಂಬ ಬೆಲ್ಲವ ಸೇರಿಸಿ ಮುಂಬರುವ ಕಾಲದಿ ಬೆಲ್ಲದ ಸವಿಯು ಹೆಚ್ಚಾಗಿ ಬೇವಿನ ಕಹಿಯು ಮರೆಯಾಗಿ ಸುಖ ಸಂತೋಷ ತುಂಬಲೆಂದು ಬಾಳಲಿ ಹರಸೋಣ, ಪ್ರಾರ್ಥಿಸೋಣ ಖರ ನಾಮ ಸಂವತ್ಸರದ ಕಹಿಯನ್ನೆಲ್ಲಾ ಮರೆತು ನಂದನ ನಾಮ ಸಂವತ್ಸರದಿ ನಲಿ ನಲಿದಾಡುತ ದ್ವೇಷ ಹಗೆತನವ ಎಲ್ಲವನ್ನು ಮರೆತು ಸ್ನೇಹಸೌಹಾರ್ದವ ಮೆರೆದು ಎಲ್ಲರಲೂ ಒಂದಾಗೋಣ... ಸರ್ವರಿಗೂ ನೂತನ ಸಂವತ್ಸರದ / ಯುಗಾದಿಯ/ ಹೊಸ ವರ್ಷದ ಶುಭಾಶಯಗಳು

ಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ
ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ
ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ
ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ

ಉದಯಕಾಲದಿ ಎದ್ದು ಅಂಗಳವ ಸಾರಿಸಿ
ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವ ಬಿಡಿಸಿ
ಹೊಸ ಚಿಗುರಿನ ಮಾವಿನ ತೋರಣವ ಕಟ್ಟಿ
ಸಂಭ್ರಮದಿ ಬರಮಾಡಿಕೊಳ್ಳೋಣ ಯುಗಾದಿಯ

ಕಷ್ಟಗಳೆಂಬ ಬೇವಿಗೆ ಸುಖವೆಂಬ ಬೆಲ್ಲವ ಸೇರಿಸಿ
ಮುಂಬರುವ ಕಾಲದಿ ಬೆಲ್ಲದ ಸವಿಯು ಹೆಚ್ಚಾಗಿ
ಬೇವಿನ ಕಹಿಯು ಮರೆಯಾಗಿ ಸುಖ ಸಂತೋಷ
ತುಂಬಲೆಂದು ಬಾಳಲಿ ಹರಸೋಣ, ಪ್ರಾರ್ಥಿಸೋಣ

ಖರ ನಾಮ ಸಂವತ್ಸರದ ಕಹಿಯನ್ನೆಲ್ಲಾ ಮರೆತು
ನಂದನ ನಾಮ ಸಂವತ್ಸರದಿ ನಲಿ ನಲಿದಾಡುತ
ದ್ವೇಷ ಹಗೆತನವ ಎಲ್ಲವನ್ನು ಮರೆತು
ಸ್ನೇಹಸೌಹಾರ್ದವ ಮೆರೆದು ಎಲ್ಲರಲೂ ಒಂದಾಗೋಣ...

ಸರ್ವರಿಗೂ ನೂತನ ಸಂವತ್ಸರದ / ಯುಗಾದಿಯ/ ಹೊಸ ವರ್ಷದ ಶುಭಾಶಯಗಳು

Friday 17 February, 2012

೧೨-೦೨-೧೨ ವಾಕ್ಪಥ ವಾರ್ಷಿಕೋತ್ಸವ ಒಂದು ವರದಿ

ನೆನ್ನೆ ಅಂದರೆ ಭಾನುವಾರ ದಿನಾಂಕ ೧೨-೦೨-೧೨ ದಂದು ವಾಕ್ಪಥ ತನ್ನ ಹನ್ನೆರಡನೆ ಹೆಜ್ಜೆ ಅಂದರೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. ಅದು ಸರಿ ಆದರೆ ಈ ದಿನಾಂಕದಲ್ಲಿ ಇರುವ ಅಂಕಿಗಳಿಗೂ ನೆನ್ನೆಯ ಗೋಷ್ಟಿಗೂ ತಳುಕು ಹಾಕಿಕೊಂಡಿರುವುದು ವಾಕ್ಪಥ ಗೋಷ್ಠಿ ಮುಗಿಸಿದ ಮೇಲೆ ನನ್ನ ಅರಿವಿಗೆ ಬಂತು. ಹೇಗೆ ಅಂದಿರಾ? ೧೨ನೆ ತಾರೀಖಿನಂದು ೨ ಗಂಟೆಗೆ ವಾಕ್ಪಥ ತನ್ನ ೧೨ನೆ ಹೆಜ್ಜೆಯನ್ನು ಇಟ್ಟಿತು.
ಮೊದಲಿಗೆ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ದಂಪತಿಗಳಾದ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಹಾಗೂ ಅವರ ಧರ್ಮಪತ್ನಿ ಕೇಕ್ ಕತ್ತರಿಸುವ ಮೂಲಕ ವಾಕ್ಪಥದ ವಾರ್ಷಿಕೋತ್ಸವಕ್ಕೆ ಚಾಲನೆ ದೊರಕಿತು. ಈ ಬಾರಿಯ ವಾರ್ಷಿಕೋತ್ಸವಕ್ಕೆ ಶ್ರೀಯುತ ಪಾರ್ಥಸಾರಥಿಯವರು ಹಾಗೂ ಶ್ರೀಯುತ ರಾಮ್ ಮೋಹನ್ ಅವರು ತಮ್ಮ ಕುಟುಂಬದೊಡನೆ ಬಂದದ್ದು ವಿಶೇಷ.
ಕೇಕ್ ಕತ್ತರಿಸಿದ ನಂತರ ಅಂದಿನ ಗೋಷ್ಟಿಯ ನಿರ್ವಾಹಕರಾದ ಶ್ರೀಯುತ ಸಚೇತನ್ ಭಟ್ ರವರು ಕಾರ್ಯಕ್ರಮದ ವಿವರವನ್ನು ತಿಳಿಸಿಕೊಟ್ಟರು.
ಮೊದಲ ಭಾಷಣಕಾರರು - ಶ್ರೀಯುತ ಹೊಳೆನರಸಿಪುರ ಮಂಜುನಾಥ ಅವರು
ಎರಡನೆಯ ಭಾಷಣಕಾರರು - ಶ್ರೀಯುತ ಪಾರ್ಥಸಾರಥಿಯವರು
ಮೊದಲ ಭಾಷಣದ ವಿಮರ್ಶೆ - ಶ್ರೀಯುತ ಬೆಳ್ಳಾಲ ಗೋಪಿನಾಥ ರಾಯರು
ಎರಡನೇ ಭಾಷಣದ ವಿಮರ್ಶೆ - ಶ್ರೀಯುತ ರಘು ಎಸ.ಪಿ ಅವರು
ಆಶುಭಾಷಣ ನಿರ್ವಹಣೆ - ಶ್ರೀಯುತ ರಾಮ್ ಮೋಹನ್ ಅವರು
ಸಮಯ ಪರಿಪಾಲನೆ - ಶ್ರೀಯುತ ಜಯಂತ್ ರಾಮಾಚಾರ್ ಅವರು
ಭಾಷಾ ಶುದ್ಧಿ - ಶ್ರೀಯುತ ಹರೀಶ್ ಆತ್ರೇಯ ಅವರು
ಮೊದಲ ಭಾಷಣ - ಶ್ರೀಯುತ ಹೊಳೆನರಸಿಪುರ ಮಂಜುನಾಥ
ವಿಷಯ - ಮರೆವು ಎಂಬ ಮಹಾಮಾಯೆ.
ಭಾಷಣ ಶುರು ಮಾಡಿದ ಮಂಜುನಾಥ ಅವರು ನೆರೆದಿದ್ದ ಸಭಿಕರಲ್ಲಿ ತಾವು ಆರಿಸಿಕೊಂಡಿರುವ ವಿಷಯದ ಬಗ್ಗೆ ಕೆಲ ಕಾಲ ಗೊಂದಲ ಮೂಡಿಸಿ ನಂತರ ತಮ್ಮ ವಿಷಯವನ್ನು ತಿಳಿಸಿಕೊಟ್ಟರು. ಮರೆವು ಎಂಬುದೊಂದು ನಿಜಕ್ಕೂ ಮಹಾಮಾಯೆ. ಇದಕ್ಕೆ ಆಂಗ್ಲದಲ್ಲಿ Algemer / Dementia ಎಂದು ಕರೆಯುತ್ತಾರೆ. ಸಹಜವಾಗಿ ಮುಂಚೆ ಇದು ವಯಸ್ಸಾದವರಲ್ಲಿ ಅಂದರೆ ಅರವತ್ತು ದಾಟಿದವರಿಗೆ ಇದು ಹೆಚ್ಚು ಕಾಡುತ್ತಿತ್ತು. ಆದರೆ ಈಗ ಇದೊಂದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಕೆಲವೊಮ್ಮೆ ಈ ಮರೆವು ಎಂಬುವುದು ವರವೂ ಆಗಬಹುದು ಕೆಲವೊಮ್ಮೆ ಶಾಪವೂ ಆಗಬಹುದು. ವರ ಹೇಗೆಂದರೆ ಮನುಷ್ಯ ತನ್ನ ಕಹಿ ನೆನಪುಗಳನ್ನು ಮರೆತು ನೆಮ್ಮದಿ ಇಂದ ಇರಬಹುದು. ಇದೆ ಮರೆವು ಶಾಪ ಹೇಗೆಂದರೆ ಮಕ್ಕಳು ಪರೀಕ್ಷೆಗೆ ಎಷ್ಟೆಲ್ಲಾ ತಯಾರಿ ನಡೆಸಿದ್ದರೂ ಪರೀಕ್ಷೆಯ ಸಮಯದಲ್ಲಿ ಓದಿದ್ದು ಮರೆತು ಹೋಗುವುದು. ಇನ್ನು ಮರೆವಿನಲ್ಲಿ ಮೂರು ವಿಧಗಳುಂಟು ಅವುಗಳಲ್ಲಿ ಅಲ್ಪ ಸ್ವರೂಪ, ಮಧ್ಯಮ ಸ್ವರೂಪ ಹಾಗೂ ಭೀಕರ ಸ್ವರೂಪ. ಇನ್ನು ಮರೆವಿಗೆ ಕಾರಣಗಳು ಅಧಿಕ ಮಾನಸಿಕ ಒತ್ತಡ, ರಕ್ತದೊತ್ತಡ, ಸಕ್ಕರೆ ಖಾಯಿಲೆಅತಿಯಾದ ಮದ್ಯಪಾನ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇಂತಿಷ್ಟು ಉತ್ತಮ ಮಾಹಿತಿಗಳನ್ನು ಹಾಸ್ಯಭರಿತವಾಗಿ ತಿಳಿಸಿಕೊಟ್ಟು ಮಂಜುನಾಥ ಅವರು ತಮ್ಮ ಭಾಷಣವನ್ನು ಮುಗಿಸಿದರು.
ಎರಡನೆಯ ಭಾಷಣ - ಶ್ರೀಯುತ ಪಾರ್ಥಸಾರಥಿ
ವಿಷಯ - ಸಂಘ ಸಂಸ್ಥೆಗಳು ಮತ್ತು ಸಮಾಜ.
ವಾಕ್ಪಥದ ವಾರ್ಷಿಕೋತ್ಸವದ ಸುಸಂಧರ್ಭದಲ್ಲಿ ತಾವು ಭಾಷಣ ಮಾಡುತ್ತಿರುವುದು ತಮಗೆ ಅತೀವ ಸಂತಸ ಉಂಟಾಗುತ್ತಿದೆ ಎಂದು ತಮ್ಮ ಸಂತಸ ಹಂಚಿಕೊಂಡು ಭಾಷಣ ಶುರು ಮಾಡಿದರು. ಸಂಘ ಸಂಸ್ಥೆಗಳ ಇತಿಹಾಸವನ್ನು ಕೆದಕಿದರೆ ನಾವು ಹೆಚ್ಚು ಕಡಿಮೆ ಬುದ್ಧನ ಕಾಲಕ್ಕೆ ಹೋಗಬೇಕಾಗುತ್ತದೆ. ಬುದ್ಧನು ತನ್ನ ಧರ್ಮದ ಪ್ರಚಾರಕ್ಕಾಗಿ ಎಲ್ಲೆಡೆ ಸಂಘಗಳನ್ನು ಶುರು ಮಾಡಿಕೊಂಡ. ಆತನ ಸಾಲುಗಳೇ ಹೇಳುವ ಹಾಗೆ "ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ, ಸಂಘಂ ಶರಣಂ ಗಚ್ಚಾಮಿ".  ಕಾಲದಿಂದಲೂ ನಾವು ಈ ಸಂಘ ಸಂಸ್ಥೆಗಳನ್ನೂ ಕಾಣ ಬಹುದಾಗಿದೆ. ನಂತರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವಿಷಯಕ್ಕೆ ಬಂದರೆ ಮಹಾತ್ಮ ಗಾಂಧಿಜಿಸುಭಾಶ್ ಚಂದ್ರ ಭೋಸ್ ಎಲ್ಲರೂ ಾರತೀಯರನ್ನು ಒಗ್ಗೂಡಿಸಲು ಇಂಥಹ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ತ್ತೀಚಿನ ದಿನಗಳಲ್ಲಿ ನೋಡಿದರೆ ರಸ್ತೆಗೊಂದು ಗಲ್ಲಿಗೊಂದರಂತೆ ಸಂಘ ಸಂಸ್ಥೆಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲವು ಏಕವ್ಯಕ್ತಿ ಆರಾಧಕ ಂಘಗಳಾಗಿದ್ದರೆಇನ್ನುಳಿದವು ಸಮಾಜ ಸೇವಾ ಸಂಘಗಳು ಇರುತ್ತವೆ. ಸಂಘ ಸಂಸ್ಥೆಗಳು ಸಮಾಜದ ಸದ್ಬಳಕೆಗಾಗಿ ಉಪಯೋಗವಾದರೆ ಒಳ್ಳೆಯದು ಎಂದು ತಮ್ಮ ಭಾಷಣ ಮುಗಿಸಿದರು.  
ಮೊದಲನೆಯ ಭಾಷಣದ ವಿಮರ್ಶೆ ಮಾಡಲು ಬಂದ ಬೆಳ್ಳಾಲ ಗೋಪಿನಾಥರಾಯರು ಮಂಜುನಾಥ್ ಅವರ ಕಂಚಿನ ಕಂಠವನ್ನು ಹೊಗಳುತ್ತಾ ಅವರು ಆರಿಸಿಕೊಂಡ ವಿಷಯ ವಿಶಿಷ್ಟವಾಗಿದ್ದು, ಭಾಷಣ ಉತ್ತಮ ಮಾಹಿತಿಯೊಂದಿಗೆ ಕೂಡಿತ್ತು ಂದು ತಿಳಿಸಿಕೊಟ್ಟರೆ. ಎರಡನೆಯ ಭಾಷಣದ ವಿಮರ್ಶೆ ಮಾಡಲು ಬಂದ ರಘು ಅವರು ಪಾರ್ಥಸಾರಥಿಯವರು ಆರಿಸಿಕೊಂಡ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುತ್ತಾರೆ ಆದರೆ ಪ್ರಸ್ತುತ ವಿಷಯದ ಬಗ್ಗೆ ಇನ್ನೂ ಸ್ವಲ್ಪ ತಿಳಿಸಬಹುದಿತ್ತು ಎಂದು ತಿಳಿಸಿಕೊಟ್ಟರು.
 ನಂತರ ಆಶುಭಾಷಣ ನಿರ್ವಹಿಸಿದ ರಾಮ್ ಮೋಹನ್ ಅವರು ಕೊಟ್ಟ ವಿಷಯ ಬದುಕು ಮತ್ತು ಕಲೆ.
ಈ ವಿಷಯವಾಗಿ ಮಾತನಾಡಲು ಬಂದ ಶ್ರೀಯುತ ರಘು ಎಸ.ಪಿ, ಶ್ರೀಯುತ ಹರೀಶ್ ಆತ್ರೇಯ ಹಾಗೂ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಮೂವರು ಹೆಚ್ಚು ಕಡಿಮೆ ಒಂದೇ ನಿಲುವನ್ನು ಹೊಂದಿದ್ದರು. ಬದಕು ಹಾಗೂ ಕಲೆ ಎರಡು ಬೇರೆ ಬೇರೆ ಆಗಿದ್ದು. ಕೆಲವರು ಬದುಕುವುದು ಒಂದು ಕಲೆ ಎನ್ನುತ್ತಾರೆ. ಕೆಲವರು ತಮ್ಮ ಬದುಕಿಗಾಗಿ ಕಲೆಯನ್ನು ಅವಲಂಬಿಸಿದ್ದರೆ ಮತ್ತು ಕೆಲವರು ಕಲೆಯನ್ನೇ ತಮ್ಮ ಬದುಕಾಗಿ ಸ್ವೀಕರಿಸಿದ್ದಾರೆ ಎಂಬ ನಿಲುವನ್ನು ಮಂಡಿಸಿದರು.
ನಂತರ ಜಯಂತ್ ಅವರು ಬಂದು ತಮ್ಮ ಬಳಿ ಇದ್ದ ಸಮಯದ ವರದಿಯನ್ನು ಕೊಟ್ಟರು. ಅದಾದ ನಂತರ ಶ್ರೀಯುತ ಹರೀಶ್ ಆತ್ರೇಯ ಅವರು ಭಾಷಾ ಬಳಕೆಯಲ್ಲಿ ಪಾರ್ಥಸಾರಥಿಯವರು ಒಂದೇ ಒಂದು ಆಂಗ್ಲ ಪದವನ್ನು ಬಳಸದೆ ಭಾಷಣ ಮಾಡಿದ್ದು ಹಾಗೂ ಮಂಜುನಾಥ್ ಅವರು ಆರಿಸಿಕೊಂಡ ವಿಷಯ ಹೆಚ್ಚು ವಿಜ್ಞಾನಕ್ಕೆ ಸಂಭಂಧಿಸಿದ್ದರಿಂದ ಆಂಗ್ಲ ಪದಗಳು ಬಳಸುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿಕೊಟ್ಟರು.
ನಂತರ ವಾರ್ಷಿಕೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಸಂಪದ ಸೃಷ್ಟಿಕರ್ತ ಶ್ರೀಯುತ ಹರಿಪ್ರಸಾದ್ ನಾಡಿಗರು ವಿಶೇಷ ಭಾಷಣವಾಗಿ ಸಂಪದ ನಡೆದು ಬಂದ ಹಾದಿಯನ್ನು ವಿವರಿಸಿದರು. ಏಳನೇ ವರ್ಷಕ್ಕೆ ಕಾಲಿಡುತ್ತಿರುವ ಸಂಪದದಲ್ಲಿ ೩೫೦೦೦ ಸಾವಿರಕ್ಕೂ ಹೆಚ್ಚು ಲೇಖನಗಳು, ೧೭೫೦೦೦ ಪ್ರತಿಕ್ರಿಯೆಗಳು ಇದೆ ಎಂದು ಕೇಳಿ ಅತೀವ ಆಶ್ಚರ್ಯ ಉಂಟಾಯಿತು. ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ಸೇವೆಗಾಗಿ ಸಂಪದ ಎಂಬ ಸುಂದರ ತಾಣ ನಡೆಸುತ್ತಿರುವ ಹರಿಪ್ರಸಾದ್ ಹಾಗೂ ಅವರ ತಂಡಕ್ಕೆ ವಾಕ್ಪಥ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ನಂತರ ಶ್ರೀಯುತ ಸಚೇತನ್ ಭಟ್ ಅವರು ಮಾತನಾಡಿ ವಾಕ್ಪಥದ ಹನ್ನೆರಡನೆ ಗೋಷ್ಠಿ ಅವರಿಗೆ ಸಂಪೂರ್ಣ ತೃಪ್ತಿ ಕೊಟ್ಟಿರುವುದಾಗಿ ತಿಳಿಸಿ ಅಧಿಕೃತ ಮುಕ್ತಾಯ ಹಾಡಿದರು.

Wednesday 15 February, 2012

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ




ವಾಕ್ಪಥ ತನ್ನ ಮೊದನೆಯ ವರುಷ ಸಂಭ್ರಮದಿಂದ ಪೂರೈಸಿದ ಸಂದರ್ಭ ಪುಳಿಯೊಗೆರೆ ಪಾಯಿಂಟ್  ಮೇಲೆ ಸೃಷ್ಟಿ ವೆಂಚರ್ಸ್
ನಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ ಪರಿ ಹೀಗಿತ್ತು


ಸಂಪದದ ಮೂಲಕವಾಗಿಯೇ ಹರಡಿಕೊಂಡ ಈ ವಾಕ್ಪಥದ ವರುಷದ ಸಂಭ್ರಮದ ಹರಹಿಗೆ ದನಿಗೂಡಿಸಿ ಗರಿ ಮೂಡಿಸಲು ಸಂಪದದ ಹರಿಕಾರರಾದ ಶ್ರೀಯುತ ಹರಿ ಪ್ರಸಾದ್ ನಾಡಿಗ ದಂಪತಿಗಳೂ ಸೇರಿದ್ದುದು ಮಹತ್ತರ ವಿಶೇಷ.

ಅದಕ್ಕೆಂದೇ ಎಂದಿನಂತೆ ವಾಕ್ಪಥ  ಕಾರ್ಯಕ್ರಮಗಳು  ಮತ್ತು ಅನಂತರ ವಿಷೇಷವಾಗಿ ಡಯಾಬಿಟೀಸ್ ಬಗ್ಗೆ ಖ್ಯಾತ ವೈದ್ಯರುಗಳೊಡನೆ ಸಂವಾದ ಕಾರ್ಯಕ್ರಮವನ್ನೂ ಸೃಷ್ಟಿ ವೆಂಚರ್ಸ್ ಜತೆ ಜಂಟಿಯಾಗಿ ಆಯೋಜಿಸಿತ್ತು.

Monday 30 January, 2012

ಆಧುನಿಕತೆಯ ಪಲ್ಲಟಗಳು

ಇವತ್ತು ಈ ವಾಕ್ಪಥ ೧೦ ರ ಗೋಷ್ಠಿಯಲ್ಲಿ ನಾನು ತಮ್ಮ ಮುಂದೆ ಪ್ರಸ್ತುತ ಪಡಿಸಲಿರುವ ವಿಷಯ ' ಆಧುನಿಕತೆಯ ಪಲ್ಲಟಗಳು.' ಮುಂದಿನ ಕೆಲವು ನಿಮಿಷಗಳ ಕಾಲ ನಾವು , ನಮ್ಮ ಕರಾವಳಿ , ಮಲೆನಾಡು ಅಥವಾ ಇನ್ಯಾವುದೇ ಹಳ್ಳಿಗಳ   ಕೃಷಿ ಆಧಾರಿತವಾಗಿದ್ದ ನಮ್ಮ ಬದುಕಿನ ದಿಕ್ಕು ,ಹೇಗೆ  ಆಧುನಿಕವಾಗುವ ಹಂಬಲದಲ್ಲಿ , ಆಧುನಿಕತೆಯ ಹಿಂದಿನ ರಕ್ಕಸ ಶಕ್ತಿಯಾದ ಬಂಡವಾಳಶಾಹಿ ದಿಕ್ಕಿನ ಕಡೆಗೆ ಮುಖ ಮಾಡಿ , ವ್ಯಾಪಾರೀ ಮನೋಭಾವದ ಎಡೆಗೇ ಮುಖ ಮಾಡಿ ನಿಂತಿದೆ ಎನ್ನುವದನ್ನು ಚರ್ಚಿಸೋಣ.
ಮೊದಲಿಗೆ ಆಧುನಿಕತೆ ಎಂದರೆ ಏನು ಎನ್ನುವದನ್ನು ನೋಡೋಣ. ಆಧುನಿಕತೆಯನ್ನ ಸರಳವಾದ ಶಬ್ದಗಳಲ್ಲಿ ಹೇಳಬೇಕು ಎಂದರೆ ಬದಲಾವಣೆ. ಒಂದರಿಂದ ಇನ್ನೊಂದಕ್ಕೆ ಬದಲಾಗುವದು. ಈ ಬದಲಾವಣೆಯ ಪರಿಣಾಮ ಧನಾತ್ಮಕವಾಗಿ ಇರಬಹುದು ಅಥವಾ ಋಣಾತ್ಮಕವಾಗಿರಬಹುದು. ಬದಲಾವಣೆಯ ಪ್ರಭಾವ ಋಣಾತ್ಮಕವಾಗಿದ್ದಾರೆ ಅದನ್ನು ಪಲ್ಲಟ ಅಂಥ ಕರೆಯಬಹುದು.
ಹಾಗಾದ್ರೆ ಈ ಪಲ್ಲಟಗಳು ಎಲ್ಲಿಂದ ಪ್ರಾರಂಭವಾದವು? ಸಾಮಾನ್ಯವಾಗಿ ನಾವು ನಮ್ಮ ಎಲ್ಲ ಋಣಾತ್ಮಕ ಬದಲಾವಣೆಗಳಿಗೆ ಮಾಹಿತಿ ತಂತ್ರಜ್ಞಾನ ಯುಗವನ್ನ , ಪಾಶ್ಚಿಮಾತ್ಯ ದೇಶಗಳನ್ನ ದೂಷಿಸುತ್ತೇವೆ. ಹಾಗಾದರೆ ಅವೇ ಈ ಪಲ್ಲಟಗಳ ಮೂಲವೇ? ದಿಕ್ಕನ್ನು ಹುಡುಕುತ್ತಾ ಹೋದಂತೆ ಕಾಣಸಿಗುವ ಮೂಲವೇ ಬೇರೆ.
ಇವತ್ತಿನ ಈ ಪಲ್ಲಟಗಳ ಮೂಲ ಶುರುವಾಗಿದ್ದು ಸುಮಾರು ಮೂರು ನಾಲ್ಕು ತಲೆಮಾರುಗಳ ಹಿಂದೆ.
ಮೊದಲೆಲ್ಲ ನಮ್ಮ ಹಳ್ಳಿಗಳು ಅದು ಮಲೆನಾಡು ಇರಬಹುದು ಅಥವಾ ಕರಾವಳಿ ಇರಬಹುದು , ಅಚ್ಚ ಹಸಿರಿನಿಂದ ಕೂಡಿದ ಗದ್ದೆ ಬಯಲುಗಳಾಗಿದ್ದವು. ಆಹಾರ ಧಾನ್ಯಗಳು ನಮ್ಮ ಮೊದಲ ಪ್ರಾಶಸ್ತ್ಯವಾಗಿದ್ದವು. ನಿಧಾನವಾಗಿ ನಾವು ಆ ಹಸಿರು ಗದ್ದೆ ಬಯಲುಗಳನ್ನ ಕಡಿದು , ತುಂಡು ತುಂಡು ಮಾಡಿ ಅಲ್ಲಿ ವಾಣಿಜ್ಯ ಬೆಳೆಗಳನ್ನ ಬೆಳೆಸಲಿಕ್ಕೆ ಪ್ರಾರಂಭ ಮಾಡಿದೆವು. ಭತ್ತ ಬೆಳೆಯುತಿದ್ದ ಜಾಗಗಳಲ್ಲಿ ಅಡಿಕೆ , ಹೊಗೆಸೊಪ್ಪು ಬೆಳೆಯಲು ಪ್ರಾರಂಭವಾಯಿತು. ವಾಣಿಜ್ಯ ಬೆಳೆಗಳನ್ನ ಬೆಳೆದಂತೆ ಹಣದ ಹರಿವು ಜಾಸ್ತಿ ಆಗತೊಡಗಿತು. ಹಣವಿದ್ದಲ್ಲಿ ಕೊಂಡಿಗಳು ಗಟ್ಟಿಯಾಗಿ ಇರುವದು ಕಷ್ಟ. ಕುಟುಂಬಗಳ ಕೊಂಡಿ ನಿಧಾನವಾಗಿ ಕಳಚತೊಡಗಿತು. ಹೀಗೆ ಭೂಮಿಯ ಜೊತೆ ಜೊತೆಗೆ ನಾವು ತುಂಡು ತುಂಡಾಗಿ ಹರಿದು ಹೋಗತೊಡಗೆದೆವು. ತುಂಡು ಭೂಮಿಗೆಲ್ಲ ತುಂಡರಸರು ಹುಟ್ಟತೊಡಗಿದರು. ಹೊಸ ಹೊಸ ಮನೆಗಳು ಸೃಷ್ಟಿಯಾದವು. ಮನೆಗೊಂದು ಮನೆತನಗಳಾಯಿತು. ರಸ್ತೆಗಳು ಹುಟ್ಟಿ ನಕಾಶೆ ಬದಲಾದಂತೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಬದಲಾಗತೊಡಗಿದೆವು. ಸಣ್ಣ ಸಣ್ಣ ಭೂಮಿಗಳ ಜೊತೆ ಜೊತೆಗೆ ಮನಸ್ಸು ಸಣ್ಣವಾಗುತ್ತಾ ಹೋಯಿತು. ಭಾವನಾತ್ಮಕತೆಯ ಕೊಂಡಿ ಸಡಿಲವಾಗ ತೊಡಗಿತು. ನಾವು  ಬದಲಾವಣೆಯ ಬುರುಜನ್ನ ನಮ್ಮ ಸುತ್ತ ಕಟ್ಟಿಕೊಳ್ಳುತ್ತ ಹೋದಂತೆ ಒಳಗೆ ಸಂಬಂದಗಳ ಹರಿವು ಕಡಿಮೆಯಾಗ ತೊಡಗಿತು.ಚಲನಶೀಲ , ಭಾವನಾತ್ಮಕವಾಗಿದ್ದ ಸಮುದಾಯ ನಿಧಾನವಾಗಿ ನಿರ್ಜೀವವಾಗತೊಡಗಿತು.
ಒಂದು ಸರಳ ಉದಾಹರಣೆ ಕೊಡುತ್ತೇನೆ ನೋಡಿ , ಮೊದಲೆಲ್ಲ ಮದುವೆ ಅಂದರೆ ಅದೊಂದು ಊರಿನ ಹಬ್ಬವಾಗಿತ್ತು. ತಳಿರು , ತೋರಣ ಕಟ್ಟುವದು , ಮಂಟಪ ಕಟ್ಟುವದು ಅಥವಾ ಅಡುಗೆ ಮಾಡಿ ಬಡಿಸುವದು , ಬಂದವರಿಗೆ ಉಪಚಾರ ಮಾಡುವದು ಹೀಗೆ ಎಲ್ಲ ಕೆಲಸವನ್ನ ಊರವರೆಲ್ಲ ಸೇರಿ ಮಾಡುತಿದ್ದರು.  ಆದರೆ ಇವತ್ತು ಈ ಕೆಲಸಗಳನ್ನ ಮಾಡಲಿಕ್ಕೆ ಜನರೇ ಇಲ್ಲ. ಹಾಗಾಗಿ ಮದುವೆಗಳನ್ನ ಗುತ್ತಿಗೆ ಕೊಡಲಿಕ್ಕೆ ಶುರು ಮಾಡಿದ್ವಿ.  ತಳಿರು , ತೋರಣ ಕಟ್ಟುವದು , ಮಂಟಪ ಕಟ್ಟುವದು , ಉಪಚಾರ ಎಲ್ಲವನ್ನು ಇನ್ನೊಬ್ಬರಿಗೆ ಮಾರಿದ್ವಿ. ಮನೆಗಳ ಮುಂದಿನ ಮದುವೆ ಚಪ್ಪರ ಕಲ್ಯಾಣ ಮಂಟಪಗಳಿಗೆ ಸ್ಥಳಾಂತರವಾಯಿತು. ಗುತ್ತಿಗೆಯನ್ನು ತಗೊಂಡವರು ಮದುವೆ ನಡೆಸಿಕೊಟ್ಟರೇನೋ ಸರಿ ಆದರೆ ಅಲ್ಲಿ ಆತ್ಮೀಯತೆಯ ಕೊರತೆ ಕೊರತೆಯಾಗಿಯೆ ಉಳಿಯಿತು.
ಇವತ್ತು ನಮ್ಮ ಹಳ್ಳಿಗಳನ್ನು ಕಾಡುತ್ತಿರುವ ಇನ್ನೊಂದು ಭಯವೆಂದರೆ ಕಳಚುತ್ತಿರುವ ತಲೆಮಾರುಗಳ ಸರಪಳಿ.  ಹಳ್ಳಿಗಳು ಇವತ್ತು ವೃದ್ದಾಶ್ರಮ ಆಗುವ ಭೀತಿಯಲ್ಲಿವೆ. ಹಳ್ಳಿಗಳಲ್ಲಿ ವೇದವನ್ನ ಕಲಿತವರು ಶಹರಗಳಲ್ಲಿ ಆಧುನಿಕ ಪುಜಾರಿಗಳಾದರು , ಇನ್ನೂ ಹಲವರು ನಮ್ಮ ನಿಮ್ಮ ಹಾಗೆ ಶಹರದ ನೌಕರಿಗೆ ಜೋತು ಬಿದ್ದರು. ಹೀಗಾಗಿ ಇವತ್ತು ನೀವು ಹಳ್ಳಿಗಳಲ್ಲಿ ಹುಡುಕಿದರೆ ಕಾಣಸಿಗುವದು ಬೆರಳೆಣಿಕೆಯಷ್ಟು ನವಯುವಕರನ್ನು. ಪಲ್ಲಟಗಳ ಸ್ವರೂಪ ಎಷ್ಟು ಕ್ರೂರವೆಂದು ಹೇಳಲಿಕ್ಕೆ ಇನ್ನೂ ಒಂದು ಉದಾಹರಣೆ ಕೊಡುತ್ತೇನೆ ನೋಡಿ. ಇವತ್ತು ಮಲೆನಾಡಿನ ಹಲವೆಡೆ ತೀವ್ರವಾದ ಹೆಣ್ಣಿನ ಅಭಾವವಿದೆ. ಮದುವೆ ಆಗಬೇಕಾದರೆ ಗಂಡಿಗಿರುವ ಮುಖ್ಯ ಅರ್ಹತೆಗಳು ೩. ಬೆಂಗಳೂರಿನಲ್ಲಿ ಇರಬೇಕು. ಅಪ್ಪ ಅಮ್ಮಂದಿರ ಜೊತೆಗೆ ಇರಬಾರದು. ಹಾಗೂ ಊರಿನಲ್ಲಿ ಜಮೀನು ಇರಬೇಕು.!!
ಬೆಂಗಳೂರಿನಲ್ಲಿ ಇರಬೇಕು ಅನ್ನುವದು ಪಟ್ಟಣದ ಮೋಹ. ಅಪ್ಪ ಅಮ್ಮರ ಜೊತೆಗೆ ಇರಬಾರದು ಎನ್ನುವದು ನಮ್ಮ ಭಾವನಾತ್ಮಕತೆಯ ಕೊರತೆ, ಹಾಗಾದರೆ ಮೂರನೆಯದು ಯಾಕೆ?  ಯಾಕೆಂದರೆ ಎಲ್ಲೋ ಒಂದು ಕಡೆ ನಾವು ಶಹರದ ಜೀವನಕ್ಕೆ ಮುಖ ಮಾಡಿದರೂ ನಮ್ಮಲ್ಲಿ ಭೂಮಿಯೆಡೆಗಿನ ತುಡಿತ , ಮೋಹ ಹಾಗೆ ಇದೆ!! ಅದು ಇಲ್ಲದ ಇದನ್ನು ಒಪ್ಪಿಕೊಳ್ಳಲಾರದ ಸ್ಥಿತಿ..!
ಚರಿತ್ರೆಯ ಪುಟಗಳನ್ನ ಅವಲೋಕಿಸಿದರೆ ಇಂತಹ ಪಲ್ಲಟಗಳು ಕಾಲಘಟ್ಟಗಳಲ್ಲಿ ಸಾಮಾನ್ಯವೆ. ಆದರೆ ಕಾಲ ಪಲ್ಲಟಕ್ಕಾಗಿ ನಮ್ಮ ಕಾಲಘಟ್ಟವನ್ನು ಆಯ್ಕೆ ಮಾಡಿಕೊಂಡಿದೆ ಎಂದಾಗ ಅದು ಕ್ರೂರ ಆಯ್ಕೆಯಾಗಿ ತೋರುತ್ತದೆ.
ಹೀಗೆ ಇಂತಹ ಪಲ್ಲಟಗಳ ಕುರಿತು ವಿಷಾದವಾಗಿ ಮಾತನಾಡುವದರ ಹೊರತಾಗಿ ಬೇರೆನಾದರು ಮಾಡಲು ಸಾಧ್ಯವೇ ಎಂದು ತಮ್ಮ ಮುಂದೆ ಕಳವಳವನ್ನ ಪ್ರಶ್ನೆಯೊಂದಿಗೆ ದಾಟಿಸುತ್ತಾ ಮಾತನ್ನ ಮುಗಿಸುತಿದ್ದೇನೆ