ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday 17 February, 2012

೧೨-೦೨-೧೨ ವಾಕ್ಪಥ ವಾರ್ಷಿಕೋತ್ಸವ ಒಂದು ವರದಿ

ನೆನ್ನೆ ಅಂದರೆ ಭಾನುವಾರ ದಿನಾಂಕ ೧೨-೦೨-೧೨ ದಂದು ವಾಕ್ಪಥ ತನ್ನ ಹನ್ನೆರಡನೆ ಹೆಜ್ಜೆ ಅಂದರೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. ಅದು ಸರಿ ಆದರೆ ಈ ದಿನಾಂಕದಲ್ಲಿ ಇರುವ ಅಂಕಿಗಳಿಗೂ ನೆನ್ನೆಯ ಗೋಷ್ಟಿಗೂ ತಳುಕು ಹಾಕಿಕೊಂಡಿರುವುದು ವಾಕ್ಪಥ ಗೋಷ್ಠಿ ಮುಗಿಸಿದ ಮೇಲೆ ನನ್ನ ಅರಿವಿಗೆ ಬಂತು. ಹೇಗೆ ಅಂದಿರಾ? ೧೨ನೆ ತಾರೀಖಿನಂದು ೨ ಗಂಟೆಗೆ ವಾಕ್ಪಥ ತನ್ನ ೧೨ನೆ ಹೆಜ್ಜೆಯನ್ನು ಇಟ್ಟಿತು.
ಮೊದಲಿಗೆ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ದಂಪತಿಗಳಾದ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಹಾಗೂ ಅವರ ಧರ್ಮಪತ್ನಿ ಕೇಕ್ ಕತ್ತರಿಸುವ ಮೂಲಕ ವಾಕ್ಪಥದ ವಾರ್ಷಿಕೋತ್ಸವಕ್ಕೆ ಚಾಲನೆ ದೊರಕಿತು. ಈ ಬಾರಿಯ ವಾರ್ಷಿಕೋತ್ಸವಕ್ಕೆ ಶ್ರೀಯುತ ಪಾರ್ಥಸಾರಥಿಯವರು ಹಾಗೂ ಶ್ರೀಯುತ ರಾಮ್ ಮೋಹನ್ ಅವರು ತಮ್ಮ ಕುಟುಂಬದೊಡನೆ ಬಂದದ್ದು ವಿಶೇಷ.
ಕೇಕ್ ಕತ್ತರಿಸಿದ ನಂತರ ಅಂದಿನ ಗೋಷ್ಟಿಯ ನಿರ್ವಾಹಕರಾದ ಶ್ರೀಯುತ ಸಚೇತನ್ ಭಟ್ ರವರು ಕಾರ್ಯಕ್ರಮದ ವಿವರವನ್ನು ತಿಳಿಸಿಕೊಟ್ಟರು.
ಮೊದಲ ಭಾಷಣಕಾರರು - ಶ್ರೀಯುತ ಹೊಳೆನರಸಿಪುರ ಮಂಜುನಾಥ ಅವರು
ಎರಡನೆಯ ಭಾಷಣಕಾರರು - ಶ್ರೀಯುತ ಪಾರ್ಥಸಾರಥಿಯವರು
ಮೊದಲ ಭಾಷಣದ ವಿಮರ್ಶೆ - ಶ್ರೀಯುತ ಬೆಳ್ಳಾಲ ಗೋಪಿನಾಥ ರಾಯರು
ಎರಡನೇ ಭಾಷಣದ ವಿಮರ್ಶೆ - ಶ್ರೀಯುತ ರಘು ಎಸ.ಪಿ ಅವರು
ಆಶುಭಾಷಣ ನಿರ್ವಹಣೆ - ಶ್ರೀಯುತ ರಾಮ್ ಮೋಹನ್ ಅವರು
ಸಮಯ ಪರಿಪಾಲನೆ - ಶ್ರೀಯುತ ಜಯಂತ್ ರಾಮಾಚಾರ್ ಅವರು
ಭಾಷಾ ಶುದ್ಧಿ - ಶ್ರೀಯುತ ಹರೀಶ್ ಆತ್ರೇಯ ಅವರು
ಮೊದಲ ಭಾಷಣ - ಶ್ರೀಯುತ ಹೊಳೆನರಸಿಪುರ ಮಂಜುನಾಥ
ವಿಷಯ - ಮರೆವು ಎಂಬ ಮಹಾಮಾಯೆ.
ಭಾಷಣ ಶುರು ಮಾಡಿದ ಮಂಜುನಾಥ ಅವರು ನೆರೆದಿದ್ದ ಸಭಿಕರಲ್ಲಿ ತಾವು ಆರಿಸಿಕೊಂಡಿರುವ ವಿಷಯದ ಬಗ್ಗೆ ಕೆಲ ಕಾಲ ಗೊಂದಲ ಮೂಡಿಸಿ ನಂತರ ತಮ್ಮ ವಿಷಯವನ್ನು ತಿಳಿಸಿಕೊಟ್ಟರು. ಮರೆವು ಎಂಬುದೊಂದು ನಿಜಕ್ಕೂ ಮಹಾಮಾಯೆ. ಇದಕ್ಕೆ ಆಂಗ್ಲದಲ್ಲಿ Algemer / Dementia ಎಂದು ಕರೆಯುತ್ತಾರೆ. ಸಹಜವಾಗಿ ಮುಂಚೆ ಇದು ವಯಸ್ಸಾದವರಲ್ಲಿ ಅಂದರೆ ಅರವತ್ತು ದಾಟಿದವರಿಗೆ ಇದು ಹೆಚ್ಚು ಕಾಡುತ್ತಿತ್ತು. ಆದರೆ ಈಗ ಇದೊಂದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಕೆಲವೊಮ್ಮೆ ಈ ಮರೆವು ಎಂಬುವುದು ವರವೂ ಆಗಬಹುದು ಕೆಲವೊಮ್ಮೆ ಶಾಪವೂ ಆಗಬಹುದು. ವರ ಹೇಗೆಂದರೆ ಮನುಷ್ಯ ತನ್ನ ಕಹಿ ನೆನಪುಗಳನ್ನು ಮರೆತು ನೆಮ್ಮದಿ ಇಂದ ಇರಬಹುದು. ಇದೆ ಮರೆವು ಶಾಪ ಹೇಗೆಂದರೆ ಮಕ್ಕಳು ಪರೀಕ್ಷೆಗೆ ಎಷ್ಟೆಲ್ಲಾ ತಯಾರಿ ನಡೆಸಿದ್ದರೂ ಪರೀಕ್ಷೆಯ ಸಮಯದಲ್ಲಿ ಓದಿದ್ದು ಮರೆತು ಹೋಗುವುದು. ಇನ್ನು ಮರೆವಿನಲ್ಲಿ ಮೂರು ವಿಧಗಳುಂಟು ಅವುಗಳಲ್ಲಿ ಅಲ್ಪ ಸ್ವರೂಪ, ಮಧ್ಯಮ ಸ್ವರೂಪ ಹಾಗೂ ಭೀಕರ ಸ್ವರೂಪ. ಇನ್ನು ಮರೆವಿಗೆ ಕಾರಣಗಳು ಅಧಿಕ ಮಾನಸಿಕ ಒತ್ತಡ, ರಕ್ತದೊತ್ತಡ, ಸಕ್ಕರೆ ಖಾಯಿಲೆಅತಿಯಾದ ಮದ್ಯಪಾನ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇಂತಿಷ್ಟು ಉತ್ತಮ ಮಾಹಿತಿಗಳನ್ನು ಹಾಸ್ಯಭರಿತವಾಗಿ ತಿಳಿಸಿಕೊಟ್ಟು ಮಂಜುನಾಥ ಅವರು ತಮ್ಮ ಭಾಷಣವನ್ನು ಮುಗಿಸಿದರು.
ಎರಡನೆಯ ಭಾಷಣ - ಶ್ರೀಯುತ ಪಾರ್ಥಸಾರಥಿ
ವಿಷಯ - ಸಂಘ ಸಂಸ್ಥೆಗಳು ಮತ್ತು ಸಮಾಜ.
ವಾಕ್ಪಥದ ವಾರ್ಷಿಕೋತ್ಸವದ ಸುಸಂಧರ್ಭದಲ್ಲಿ ತಾವು ಭಾಷಣ ಮಾಡುತ್ತಿರುವುದು ತಮಗೆ ಅತೀವ ಸಂತಸ ಉಂಟಾಗುತ್ತಿದೆ ಎಂದು ತಮ್ಮ ಸಂತಸ ಹಂಚಿಕೊಂಡು ಭಾಷಣ ಶುರು ಮಾಡಿದರು. ಸಂಘ ಸಂಸ್ಥೆಗಳ ಇತಿಹಾಸವನ್ನು ಕೆದಕಿದರೆ ನಾವು ಹೆಚ್ಚು ಕಡಿಮೆ ಬುದ್ಧನ ಕಾಲಕ್ಕೆ ಹೋಗಬೇಕಾಗುತ್ತದೆ. ಬುದ್ಧನು ತನ್ನ ಧರ್ಮದ ಪ್ರಚಾರಕ್ಕಾಗಿ ಎಲ್ಲೆಡೆ ಸಂಘಗಳನ್ನು ಶುರು ಮಾಡಿಕೊಂಡ. ಆತನ ಸಾಲುಗಳೇ ಹೇಳುವ ಹಾಗೆ "ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ, ಸಂಘಂ ಶರಣಂ ಗಚ್ಚಾಮಿ".  ಕಾಲದಿಂದಲೂ ನಾವು ಈ ಸಂಘ ಸಂಸ್ಥೆಗಳನ್ನೂ ಕಾಣ ಬಹುದಾಗಿದೆ. ನಂತರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವಿಷಯಕ್ಕೆ ಬಂದರೆ ಮಹಾತ್ಮ ಗಾಂಧಿಜಿಸುಭಾಶ್ ಚಂದ್ರ ಭೋಸ್ ಎಲ್ಲರೂ ಾರತೀಯರನ್ನು ಒಗ್ಗೂಡಿಸಲು ಇಂಥಹ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ತ್ತೀಚಿನ ದಿನಗಳಲ್ಲಿ ನೋಡಿದರೆ ರಸ್ತೆಗೊಂದು ಗಲ್ಲಿಗೊಂದರಂತೆ ಸಂಘ ಸಂಸ್ಥೆಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲವು ಏಕವ್ಯಕ್ತಿ ಆರಾಧಕ ಂಘಗಳಾಗಿದ್ದರೆಇನ್ನುಳಿದವು ಸಮಾಜ ಸೇವಾ ಸಂಘಗಳು ಇರುತ್ತವೆ. ಸಂಘ ಸಂಸ್ಥೆಗಳು ಸಮಾಜದ ಸದ್ಬಳಕೆಗಾಗಿ ಉಪಯೋಗವಾದರೆ ಒಳ್ಳೆಯದು ಎಂದು ತಮ್ಮ ಭಾಷಣ ಮುಗಿಸಿದರು.  
ಮೊದಲನೆಯ ಭಾಷಣದ ವಿಮರ್ಶೆ ಮಾಡಲು ಬಂದ ಬೆಳ್ಳಾಲ ಗೋಪಿನಾಥರಾಯರು ಮಂಜುನಾಥ್ ಅವರ ಕಂಚಿನ ಕಂಠವನ್ನು ಹೊಗಳುತ್ತಾ ಅವರು ಆರಿಸಿಕೊಂಡ ವಿಷಯ ವಿಶಿಷ್ಟವಾಗಿದ್ದು, ಭಾಷಣ ಉತ್ತಮ ಮಾಹಿತಿಯೊಂದಿಗೆ ಕೂಡಿತ್ತು ಂದು ತಿಳಿಸಿಕೊಟ್ಟರೆ. ಎರಡನೆಯ ಭಾಷಣದ ವಿಮರ್ಶೆ ಮಾಡಲು ಬಂದ ರಘು ಅವರು ಪಾರ್ಥಸಾರಥಿಯವರು ಆರಿಸಿಕೊಂಡ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುತ್ತಾರೆ ಆದರೆ ಪ್ರಸ್ತುತ ವಿಷಯದ ಬಗ್ಗೆ ಇನ್ನೂ ಸ್ವಲ್ಪ ತಿಳಿಸಬಹುದಿತ್ತು ಎಂದು ತಿಳಿಸಿಕೊಟ್ಟರು.
 ನಂತರ ಆಶುಭಾಷಣ ನಿರ್ವಹಿಸಿದ ರಾಮ್ ಮೋಹನ್ ಅವರು ಕೊಟ್ಟ ವಿಷಯ ಬದುಕು ಮತ್ತು ಕಲೆ.
ಈ ವಿಷಯವಾಗಿ ಮಾತನಾಡಲು ಬಂದ ಶ್ರೀಯುತ ರಘು ಎಸ.ಪಿ, ಶ್ರೀಯುತ ಹರೀಶ್ ಆತ್ರೇಯ ಹಾಗೂ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಮೂವರು ಹೆಚ್ಚು ಕಡಿಮೆ ಒಂದೇ ನಿಲುವನ್ನು ಹೊಂದಿದ್ದರು. ಬದಕು ಹಾಗೂ ಕಲೆ ಎರಡು ಬೇರೆ ಬೇರೆ ಆಗಿದ್ದು. ಕೆಲವರು ಬದುಕುವುದು ಒಂದು ಕಲೆ ಎನ್ನುತ್ತಾರೆ. ಕೆಲವರು ತಮ್ಮ ಬದುಕಿಗಾಗಿ ಕಲೆಯನ್ನು ಅವಲಂಬಿಸಿದ್ದರೆ ಮತ್ತು ಕೆಲವರು ಕಲೆಯನ್ನೇ ತಮ್ಮ ಬದುಕಾಗಿ ಸ್ವೀಕರಿಸಿದ್ದಾರೆ ಎಂಬ ನಿಲುವನ್ನು ಮಂಡಿಸಿದರು.
ನಂತರ ಜಯಂತ್ ಅವರು ಬಂದು ತಮ್ಮ ಬಳಿ ಇದ್ದ ಸಮಯದ ವರದಿಯನ್ನು ಕೊಟ್ಟರು. ಅದಾದ ನಂತರ ಶ್ರೀಯುತ ಹರೀಶ್ ಆತ್ರೇಯ ಅವರು ಭಾಷಾ ಬಳಕೆಯಲ್ಲಿ ಪಾರ್ಥಸಾರಥಿಯವರು ಒಂದೇ ಒಂದು ಆಂಗ್ಲ ಪದವನ್ನು ಬಳಸದೆ ಭಾಷಣ ಮಾಡಿದ್ದು ಹಾಗೂ ಮಂಜುನಾಥ್ ಅವರು ಆರಿಸಿಕೊಂಡ ವಿಷಯ ಹೆಚ್ಚು ವಿಜ್ಞಾನಕ್ಕೆ ಸಂಭಂಧಿಸಿದ್ದರಿಂದ ಆಂಗ್ಲ ಪದಗಳು ಬಳಸುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿಕೊಟ್ಟರು.
ನಂತರ ವಾರ್ಷಿಕೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಸಂಪದ ಸೃಷ್ಟಿಕರ್ತ ಶ್ರೀಯುತ ಹರಿಪ್ರಸಾದ್ ನಾಡಿಗರು ವಿಶೇಷ ಭಾಷಣವಾಗಿ ಸಂಪದ ನಡೆದು ಬಂದ ಹಾದಿಯನ್ನು ವಿವರಿಸಿದರು. ಏಳನೇ ವರ್ಷಕ್ಕೆ ಕಾಲಿಡುತ್ತಿರುವ ಸಂಪದದಲ್ಲಿ ೩೫೦೦೦ ಸಾವಿರಕ್ಕೂ ಹೆಚ್ಚು ಲೇಖನಗಳು, ೧೭೫೦೦೦ ಪ್ರತಿಕ್ರಿಯೆಗಳು ಇದೆ ಎಂದು ಕೇಳಿ ಅತೀವ ಆಶ್ಚರ್ಯ ಉಂಟಾಯಿತು. ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ಸೇವೆಗಾಗಿ ಸಂಪದ ಎಂಬ ಸುಂದರ ತಾಣ ನಡೆಸುತ್ತಿರುವ ಹರಿಪ್ರಸಾದ್ ಹಾಗೂ ಅವರ ತಂಡಕ್ಕೆ ವಾಕ್ಪಥ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ನಂತರ ಶ್ರೀಯುತ ಸಚೇತನ್ ಭಟ್ ಅವರು ಮಾತನಾಡಿ ವಾಕ್ಪಥದ ಹನ್ನೆರಡನೆ ಗೋಷ್ಠಿ ಅವರಿಗೆ ಸಂಪೂರ್ಣ ತೃಪ್ತಿ ಕೊಟ್ಟಿರುವುದಾಗಿ ತಿಳಿಸಿ ಅಧಿಕೃತ ಮುಕ್ತಾಯ ಹಾಡಿದರು.

No comments:

Post a Comment