ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday, 15 July 2011

ಭಾಷಣ ಕಲೆ ಮತ್ತು ವಾಕ್ಪಥ ೧

ಅತ್ಯಂತ ಜನಪ್ರಿಯ ಸಿನೇಮಾ ಹೀರೋ ಹೃತ್ತಿಕ್ ರೋಷನ್ ಗೆ  ಬಹಳ ದೊಡ್ಡ  ವೀಕ್ ನೆಸ್ ಯಾವುದು ಗೊತ್ತೇ   : ಉಗ್ಗುವಿಕೆ

ನಿಮಗೆ ಗೊತ್ತೆ ? ಹಳೆಯ ನಾಣ್ಣುಡಿ ಹೇಳುತ್ತೆ ಜನರು ಭಾಷಣ ಮಾಡಲು ಅಂಜುವಷ್ಟು ಸಾಯಲು ಸಹಾ ಅಂಜಲ್ಲವಂತೆ. ಈ ಹೆದರಿಕೆ ನಮ್ಮಲ್ಲಿ ಹಲವಾರು ಬಾರಿ ಕೆಲವು ಪ್ರತಿಕ್ರಿಯೆಗಳನ್ನು ಉಂಟು ಮಾಡುತ್ತವೆ, ನಾವು ನಮಗರಿವಿಲ್ಲದಂತೆಯೇ ಉಗ್ಗುವುದು, ಇದಿರಿಗೆ ಬಾಗುವುದು, ಬಟ್ಟೆ ಆಗಾಗೆ ಸರಿಪಡಿಸಿಕೊಳ್ಳುವುದು, "ಅಂ" ಆ ಮುಂತಾದ ಅನವಶ್ಯಕ ಉದ್ಗಾರಗಳನ್ನು ತೆಗೆಯುವುದು, ಕೈಗಳನ್ನು ಬೆನ್ನ ಹಿಂದೆ ಮುಖದ ಮೇಲೆ ತರುವುದು, ಅಥವಾ ಹೇಳಬೇಕಾದುದನ್ನು ಮರೆತು ಬಿಡುವುದು ಮುಂತಾದ ಆನೈಚ್ಛಿಕ ಕ್ರೀಯೆಗಳನ್ನು ಮಾಡುತ್ತಿರುತ್ತೇವೆ. ಇವುಗಳು ನಮ್ಮ ಬೆರಳಚ್ಚಿನಂತೆ ಅವರವರಿಗನುಗುಣವಾಗಿರುತ್ತವೆ. ಇವುಗಳು ಯಾಕೆ ಆಗುತ್ತಿರುತ್ತವೆ..?  ಇವುಗಳನ್ನು ಹೇಗೆ ಸರಿಪಡಿಸಬಹುದು..? ಮುಂತಾದ ಅನೇಕ ವಿಷಯಗಳನ್ನು ಕಲಿತು ಕೊಳ್ಳುವುದೇ ವಾಕ್ಪಥದ ಮೊದಲ ಧ್ಯೇಯ.
ಉದ್ಧೇಶ
೧. ಪಥಿಕರಿಗೆ ತಮ್ಮ ತಮ್ಮ ಕುಂದು ಕೊರತೆಗಳನ್ನು ಮನದಟ್ಟು ಮಾಡುವುದು.
೨. ತಮ್ಮಲ್ಲಿನ ಉತ್ತಮ ಅಭ್ಯಾಸ, ಗುಣ ಮತ್ತು ವಿಶೇಷತೆಗಳನ್ನು ಗುರುತಿಸಿ ಬೆಳೆಸುವುದು.
೩. ತಮ್ಮಲ್ಲಿನ ಕುಂದುಕೊರತೆಗಳನ್ನು ನಿವಾರಿಸಿಕೊಂಡು ಉತ್ತಮ ಅಂಶ, ಅಭ್ಯಾಸಗಳನ್ನು ಹೆಚ್ಚಿಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳುವುದು.
೪. ಉತ್ತಮ ಭಾಷಣಕಾರರನ್ನು ಪರಿಚಯಿಸುತ್ತ ಅವರಿಂದ ಹೊಸ ಹೊಸ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಗೆ ಪ್ರದರ್ಶಿಸಬಹುದೆಂಬುದನ್ನು ತಿಳಿದುಕೊಳ್ಳುವುದು.
೫. ಸಮಯ ಪರಿಪಾಲನೆ.
೬. ಯೋಜನಾಬದ್ಧ , ಸಂಚಾಲನಾ ಕ್ರಮದ ಮುಂದಾಳತ್ವದ ಕಲಿಕೆ

ಕೆಲವು ಮುಖ್ಯ ಕೊರತೆಗಳು ಮತ್ತು ಅವುಗಳನ್ನು ನಿಭಾಯಿಸುವ ವಿಧಾನ:

೧.    ಕೊರತೆ  :    ಆತ್ಮ ವಿಶ್ವಾಸದ ಕೊರತೆ
      ನಿವಾರಣೆ  :  ನಾನು ಇದನ್ನು ನಿವಾರಿಸಿಕೊಳ್ಳಬಲ್ಲೆ ಎಂದು ತಾನೇ ಸತತ ಮನದಟ್ಟು ಮಾಡಿಕೊಳ್ಳುವುದು    
      ಪಲಿತಾಂಶ : ಒಳ್ಳೆಯ ಪ್ರಭಾವಶಾಲೀ ಭಾಷಣ
೨.    ಕೊರತೆ  :    ಸ್ವಲ್ಪ ಸಭಾ ಕಂಪನ
      ನಿವಾರಣೆ  :  ಸತತ ಅಭ್ಯಾಸ
      ಪಲಿತಾಂಶ : ಒಳ್ಳೆಯ ಪ್ರಭಾವಶಾಲೀ ಭಾಷಣ
೩.    ಕೊರತೆ  :    ನಿಂತಲ್ಲಿ ನಿಲ್ಲದೇ ಹಿಂದೆ ಮುಂದೆ ಚಲಿಸುವುದು, ಇದಿರಿಗೆ ಸಭಿಕರನ್ನು ನೋಡದೇ ನೆಲವನ್ನು ನೋಡುವುದು.
      ನಿವಾರಣೆ  :  ಎರಡೂ ಕಾಲಲ್ಲಿ ಗಟ್ಟಿಯಾಗಿ ಒಂದು ಕಡೆ ನಿಂತು ಮಾತನಾಡುವ ಕಲೆ ರೂಢಿಸಿಕೊಳ್ಳುವುದು.ಸಭಿಕರ ಪ್ರತಿಯೋರ್ವರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮಾತನಾಡುವುದು.ಕೊರತೆಗಳನ್ನು  ನಿವಾರಿಸಿಕೊಳ್ಳುವ ಬಗ್ಗೆ ಕಲಿಕೆ, ಮನನ.
      ಪಲಿತಾಂಶ :ಉತ್ತಮ  ಹಾವ ಭಾವವುಳ್ಳ ಭಾಷಣ ಪ್ರದರ್ಶನ.
೪.    ಕೊರತೆ  :    ವೇಗದ ಮಾತು, ಮಧ್ಯೆ ಮಧ್ಯೆ "ಅ" ಉಧ್ಗಾರ,ಅಥವಾ ಯಾವುದಾದರೂ ಒಂದು ವಸ್ತುವಿನೊಡನೆ ಆಟ ( ಉದಾಹರಣೆಗೆ ತಲೆ   ಕೂದಲು, ಪೆನ್ ಮುಂತಾದವುಗಳು)
      ನಿವಾರಣೆ  :  ನಾನು ನಿಧಾನವಾಗಿ ಎಲ್ಲರಿಗೂ ತಿಳಿಯುವ ಹಾಗೆ ಮಾತನಾಡುತ್ತೇನೆ, ಮಧ್ಯೆ ನಾನು ಯಾವುದೇ ಉಧ್ಗಾರವನ್ನೂ ತೆಗೆಯುವುದಿಲ್ಲ, ನನ್ನ ಕೈಗಳನ್ನು ಕುತ್ತಿಗೆ ಮತ್ತು ಸೊಂಟದ ಮಧ್ಯೆ ಮಾತ್ರ ಒಟ್ಟಾಗಿರಿಸಿಕೊಳ್ಳುತ್ತೇನೆ, ಎಂದುಕೊಳ್ಳುವುದು ಮತ್ತು ಮನನ ಅದನ್ನೇ ಮಾಡುವುದು
      ಪಲಿತಾಂಶ : ಸತತ ಅಭ್ಯಾಸದಿಂದ ಉತ್ತಮ ಬದಲಾವಣೆ.
೫.    ಕೊರತೆ  :    ಬರೆದು ತಂದು ಓದುವುದು.
      ನಿವಾರಣೆ  :  ಮೊದ ಮೊದಲು ಎಲ್ಲವನ್ನೂ ಬರೆದು ತರದೇ , ಕಡಿಮೆ ಬರೆದು ತರುವುದು, ಸತತ ಅಭ್ಯಾಸ ಮತ್ತು ಮನನ
      ಪಲಿತಾಂಶ : ವಿಷಯಗಳ ತಲೆ ಬರಹಗಳ ಅಡಿ ಟಿಪ್ಪಣಿ ಬರೆದಿಟ್ಟುಕೊಂಡು ಅದನ್ನು ಆತ್ಮ ವಿಶ್ವಾಸದಿಂದ ಭಾಷಣ ಮಾಡುವುದು.

ವಾಕ್ಪಥದ ೫ನೆ ಹೆಜ್ಜೆಯು,೧೭/೦೭/೨೦೧೧ ,ಭಾನುವಾರ ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ
ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.
ಕಾರ್ಯಕ್ರಮದ ವಿವರ:
ಗೋಷ್ಠಿಯ ನಿರ್ವಹಣೆ:  ಶ್ರೀಸುನೀಲ ದಾಸಪ್ಪನವರ
ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೦-೧೫ಕ್ಕೆ
ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಇತ್ಯಾದಿಗಳನ್ನು ಸುನೀಲ ದಾಸಪ್ಪನವರ ತಿಳಿಸುತ್ತಾರೆ.
ಭಾಷಣಗಳು:
ವಾಕ್ಪಥಿಕರು ತಮ್ಮ ಭಾಷಣವನ್ನು ಆರ೦ಭಿಸುವ ಮುನ್ನ ಅವರ ಪರಿಚಯವನ್ನು ಸುನೀಲ ಮಾಡಲಿದ್ದಾರೆ.  ಪ್ರತಿ ಭಾಷಣಕಾರರಿಗೆ ಆರು ನಿಮಿಷಗಳ ಸಮಯವಿರುತ್ತದೆ.  ತಮ್ಮ ಭಾಷಣದ ವಿಷಯವನ್ನು ಸಭಾಕ೦ಪನವನ್ನು ನಿವಾರಿಸಿಕೊ೦ಡು, ಆತ್ಮವಿಶ್ವಾಸದಿ೦ದ, ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಮ೦ಡಿಸುವುದು, ತನ್ಮೂಲಕವಾಕ್ಪಥಿಕರು ತಮ್ಮ ವಿಷಯ ಮ೦ಡನಾ ಹಾಗೂ ಭಾಷಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ನೆರವಾಗುವುದು ಈ ಗೋಷ್ಠಿಯ  ಮುಖ್ಯ ಉದ್ಧೇಶ.
ಮೊದಲನೆಯ ಭಾಷಣ: ಶ್ರೀ ಕಿರಣಕುಮಾರ
ಎರಡನೆಯ ಭಾಷಣ:  ಶ್ರೀ ಧ್ರುವ ಹೆಗ್ದೆ
ಮೂರನೆಯ ಭಾಷಣ:  ಶ್ರೀ ಗೋಪಾಲ ಕುಲಕರ್ಣಿ
ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.
ಮೊದಲನೆಯ ಭಾಷಣದ ವಿಮರ್ಶೆ: ಶ್ರೀ ಪ್ರಸನ್ನ ಕುಲಕರ್ಣಿ
ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪಾರ್ಥಸಾರಥಿ
ಮೂರನೆಯ ಭಾಷಣದ ವಿಮರ್ಶೆ:   ಶ್ರೀ ರಾಮಮೋಹನ.
ವಿಶೇಷ ಭಾಷಣ:   ಶ್ರೀ ರಘುನಂದನ ಹಾಲೂರ್

1 comment:

  1. ಉತ್ತಮವಾದ ಸಲಹೆಗಳು,
    ಧನ್ಯವಾದ

    ReplyDelete