ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday 11 December, 2011

ವಾಕ್ಪಥ - ಹೆಜ್ಜೆ ೧೦ ವರದಿ


ವಾಕ್ಪಥ - ಹೆಜ್ಜೆ ೧೦ 


                                                               
ವಾಕ್ಪಥ ಹೆಜ್ಜೆ - ೧೦ ಎಂದಿನಂತೆ ನಿಗದಿತ ಎರಡನೆ ಬಾನುವಾರ ಅಂದರೆ ೧೦ ನೆ ಡಿಸೆಂಬರ್  ೨೦೧೧ ಬೆಳಗಿನ ಸಮಯ ೧೦-೧೫ ಗಂಟೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ನ ಎರಡನೆ ಮಹಡಿಯಲ್ಲಿ ಪ್ರಾರಂಬ ವಾಯಿತು. ಈ ದಿನದ ಗೋಷ್ಥಿಯಲ್ಲಿ ಹೊಸ ಮುಖಗಳು ಗಮನ ಸೆಳೆದವು. ನಿಗದಿತ ಬಾಷಣಗಳು , ಆಶುಬಾಷಣಗಳು ಮನಸಿಗೆ ಮುದ ನೀಡಿದವು. ಮುಂದಿನ ವಾಕ್ಪಥದ ಬಗ್ಗೆಯಾಗಲಿ ೨೦೧೨ ಫೆಬ್ರುವರಿಯಲ್ಲಿ ನಡೆಯ ಬೇಕಾಗಿರುವ ವಾಕ್ಪಥದ ವಾರ್ಷಿಕ ಸಂಬ್ರಮದ ಕಾರ್ಯಕ್ರಮದ ಬಗ್ಗೆಯಾಗಲಿ ಎಲ್ಲ ಸದಸ್ಯರು ಸಕ್ರಿಯವಾಗಿ ಬಾಗವಹಿಸಿ ವಾಕ್ಪಥ ಹೆಜ್ಜೆ ೧೦ ಸುನಿಲ್ ದಾಸಪ್ಪ ನವರ ನೇತೃತ್ವದಲ್ಲಿ ಯಶಸ್ವಿ ಕಾರ್ಯಕ್ರಮವಿನಿಸಿತು.


ವಾಕ್ಪಥ ಹೆಜ್ಜೆ ೧೦ ಕಾರ್ಯಕ್ರಮದ ವಿವರಗಳು:


  ಸುನಿಲ್ ದಾಸಪ್ಪನವರು ಕಾರ್ಯಕ್ರಮದ ನಿರ್ವಹಣೆ ಹೊತ್ತು ಮೊದಲಿಗೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಾಷಣಗಾರರ ಪರಿಚಯ, ಮತ್ತು ಅವರು ಆರಿಸಿಕೊಂಡಿರುವ ವಿಷಯವನ್ನು ತಿಳಿಸಿದರು. ಸಮಯದ ನಿರ್ವಹಣೆಯನ್ನು ಗೋಪಿನಾಥರಿಗೆ ವಹಿಸಲಾಯಿತು.

  ಗೋಪಿನಾಥರು ಬಾಷಣಕಾರರಿಗೆ ಮತ್ತು ಆಶುಬಾಷಣದವರಿಗೆ ನಿಗದಿಯಾಗಿರುವ ಸಮಯಾವಕಾಶ ತಿಳಿಸಿ, ಸಭೆಯ ನಿಯಮಗಳನ್ನು ವಿವರಿಸಿ ತಮ್ಮ ಹಸಿರು ಹಳದಿ ಹಾಗು ಕೆಂಪು ಬಾವುಟಗಳ ಸಮಯ ದಂಡ ಹಿಡಿದು ಸಿದ್ದರಾಗಿ ಕುಳಿತರು. ಹಾಗೆಯೆ ಎಂದಿನಂತೆ ಅವರ ಮುಂದೆ ಅವರ ಕ್ಯಾಮರ ಸಹ ಸಿದ್ದವಾಗಿತ್ತು ವಾಕ್ಪಥದ ನಡಿಗೆಗನ್ನು ಚಿತ್ರಿಸಲು.


  ಮೊದಲಿಗೆ ನಿರ್ವಾಹಕರು ಶ್ರೀ.ಸುಚೇತನ್ ಭಟ್ ರವರನ್ನು ಬಾಷಣಕ್ಕೆ ಅಹ್ವಾನಿಸಿದರು , ಇವರು ಬಾಷಣಕ್ಕೆ ಆರಿಸಿಕೊಂಡಿದ್ದ ವಿಷಯ

  'ಅಧುನಿಕತೆಯ ಪಲ್ಲಟ'
   
  ಸುಚೇತನ್ ಭಟ್ ರವರ ಪರಿಚಯ : ವೃತ್ತಿಯಲ್ಲಿ ಅಭಿಯಂತರಾಗಿರುವ ಇವರಿಗೆ ಇತಿಹಾಸ ಸಾಹಿತ್ಯದಲ್ಲಿ ಆಸಕ್ತಿ.


  ಬಾಷಣದ ವಿವರ : ಭಟ್ ರವರು ಅದುನಿಕತೆಯ ಪಲ್ಲಟ ನಮ್ಮ ಬದುಕಿನ ಮೇಲೆ ಮಾಡಿರುವ ಪರಿಣಾಮಗಳನ್ನು ಯಶಸ್ವಿಯಾಗಿ ವಿವರಿಸಿದರು. ಭಾರತ ಎಂದಿಗು ಕೃಷಿಪ್ರಧಾನವಾದ ದೇಶ. ಅದರೆ ಅದು ಅದುನಿಕತೆಯ ಪ್ರಭಾವದಿಂದ ತನ್ನ ಹಾದಿ ಬದಲಿಸಿ ಹೇಗೆ ಬಂಡವಾಳಶಾಯಿಗಳ ಹಿಡಿತದತ್ತ ಹೊರಳಿತು ಎಂದು ವಿವರಿಸಿದರು. ಅವರು ಹೇಳಿದಂತೆ ಪಲ್ಲಟವೆಂದರೆ ಬದಲಾವಣೆ , ಅದುನಿಕತೆಯತ್ತ ಪಲ್ಲಟವಾಗುವಾಗ ಋಣಾತ್ಮಕ ಹಾಗು ಧನಾತ್ಮಕ ಪರಿಣಾಮಗಳಿರುತ್ತವೆ, ಈ ಋಣಾತ್ಮಕ ಪರಿಣಾಮಗಳನ್ನು ನಾವು ಪಲ್ಲಟಗಳೆಂದು ಗುರುತಿಸುತ್ತೇವೆ ಎಂದರು. ಈ ಬಂಡವಾಳಶಾಯಿಗಳ ಪ್ರಭಾವ ಕೃಷಿಯ ಮೇಲೆ ತನ್ನ ಪರಿಣಾಮ ಬೀರಿತು ಹಾಗಾಗಿ ಅಹಾರಪ್ರಧಾನವಾಗಿದ್ದ ಬೇಸಾಯ,  ವಾಣಿಜ್ಯ ಬೆಳೆಗಳತ್ತ ಹೊರಳಿತು. ಹಣದ ಹರಿವು ಜಾಸ್ತಿಯಾಗುತ್ತ ಹೋದಂತೆ, ಮಾನಸಿಕ ಹಾಗು ಭಾವನಾತ್ಮಕ ಕೊಂಡಿಗಳು ಬೇರ್ಪಟ್ಟವು. ಹೀಗಾಗಿ ಸಂವಹನ ಕೊರತೆಯುಂಟಾಯಿತು, ಪರಿಣಾಮ ಕುಟುಂಬಗಳು ಛಿದ್ರಗೊಂಡವು. ಕುಟುಂಬಗಳು ಸಣ್ಣ ಘಟಕಗಳಾಗಿ ಹರಿದು ಹೋದಂತೆ ಹಿರಿಯರಿಂದ ಬಂದ ನೆಲವು ಸಣ್ಣ ಸಣ್ಣ ಹೋಳುಗಳಾಗಿ ಬೇಸಾಯದ ಮೇಲು ಋಣಾತ್ಮಕ ಪರಿಣಾಮ ಬೀರಿತು ಎಂದು ತಿಳಿಸಿದರು.
    ಹಣದ ಪ್ರಭಾವದಿಂದ ಹಳ್ಳಿಗಳ ಜನರು ಪಟ್ಟಣಕ್ಕೆ ವಲಸೆ ಹೊರಟರು, ಹಳ್ಳಿಯ ಜೀವನಕ್ಕಿಂತ ಪಟ್ಟಣ ಮನಸಿಗೆ ಪ್ರಿಯವಾಯಿತು, ಆದರೆ ಬೇಸಾಯವನ್ನೆ ನಂಬಿದ್ದ ಹಿರಿಯರು ಹಳ್ಳಿಗಳನ್ನು ತೊರೆದು ಬರದಾದರು, ಹೀಗಾಗಿ ಹಳ್ಳಿಗಳಲ್ಲಿರುವ ಮನೆಗಳು ಈಗ ವೃದ್ದಾಶ್ರಮವಾಗಿ ಉಳಿದಿದೆ ಎಂದರು.
 
   ಕಾಲಘಟ್ಟದಲ್ಲಿ ಇಂತಹ ಬದಲಾವಣೆಗಳು ಸಾಮಾನ್ಯ ಎಂದ ಭಟ್ ರವರು ಇಂತಹುದು ಇತಿಹಾಸದಲ್ಲಿ ನಡೆಯುತ್ತಲೆ ಬಂದಿದೆ ಆದರೆ ಇತಿಹಾಸ ಇಂದಿನ ಬದಲಾವಣೆಗೆ ನಮ್ಮ ಕಾಲಮಾನವನ್ನು ಆಯ್ದುಕೊಂಡಿದೆ ಹೀಗಾಗಿ ನಾವೆಲ್ಲ ಇಂದಿನ ಪಲ್ಲಟಗಳಿಗೆ ಒಡ್ಡಿಕೊಳ್ಳಬೇಕಾಗಿದೆ ಎಂದು ತಿಳಿಸಿ ಇದು ಅನಿವಾರ್ಯ ಎನ್ನುತ್ತ ತಮ್ಮ ಮಾತು ಮುಗಿಸಿದರು.
   
   ನಂತರ ನಿರ್ವಾಹಕರು ಶ್ರೀಮತಿ . ಪದ್ಮಶ್ರಿ ಮೂರ್ತಿಯವರನ್ನು ಎರಡನೆ ಬಾಷಣಕಾರರನ್ನಾಗಿ ಸ್ವಾಗತಿಸಿದರು, ಪದ್ಮಶ್ರಿ ರವರು ಆರಿಸಿಕೊಂಡಿದ್ದ ವಿಷಯ
"ವಿವಾಹ : ಮತ್ತು ವಿಚ್ಚೇದನ"

  ಶ್ರೀಮತಿ ಪದ್ಮಶ್ರೀ ಮೂರ್ತಿಯವರ ಪರಿಚಯ : ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಮತ್ತು ಸಾಧನೆ ಮಾಡಿರುವ ಇವರು ವಿವಾಹಪೂರ್ವ ಸಮಾಲೋಚನೆ (ಕೌನ್ಸಿಲಿಂಗ್)
  ಗಾಗಿ ಇರುವ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದಾರೆ. ಸ್ವಪ್ರೇರಿತವಾಗಿ ಕೌನ್ಸಿಲಿಂಗ್ ಗಳನ್ನು ನಡೆಸುತ್ತಿದ್ದಾರೆ.


  ಬಾಷಣದ ವಿವರ : ಭಾರತ ದೇಶದಲ್ಲಿನ ಸಂಪ್ರದಾಯ ಬಹುಷಃ ವಿವಾಹನಂತರದ ಸಹಬಾಳ್ವೆಗಾಗಿ ವಿದೇಶಗಳಲ್ಲಿ ಪ್ರಖ್ಯಾತ, ಮದುವೆ ಎಂದರೆ ಭಾರತ ಎನ್ನಿಸುವಷ್ಟರ ಮಟ್ಟಿಗೆ , ಆದರೆ ಅದೇ ಭಾರತದಲ್ಲಿ ಇಂದು ಹೆಚ್ಚುತ್ತಿರುವ ವಿವಾಹ ವಿಚ್ಚೇದನಗಳು ಗಾಭರಿ ಹುಟ್ಟಿಸುವ ಮಟ್ಟಿಗೆ ಇದೆ. ಮದುವೆಯಾದ ಒಂದೆರಡು ವರ್ಷಗಳಲ್ಲಿ ಕೆಲವೊಮ್ಮೆ ಆರು ತಿಂಗಳಲ್ಲೆ ವಿಚ್ಚೇದನಕ್ಕೆ ಮೊರೆಹೋಗುತ್ತಿದ್ದಾರೆ ಅದು ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಎನ್ನುವುದು ಅಚ್ಚರಿಯ ವಿಷಯ. ಹಿಂದಿನ ದಿನಗಳಲ್ಲಿ ಮದುವೆ ಚಿಕ್ಕ ವಯಸ್ಸಿನಲ್ಲಿ ನಡುಸುತ್ತ ಇದ್ದುದ್ದರಿಂದ ಮುಂದಿನ ವದು ವರರ ಜೀವನದ ಬಗ್ಗೆ ಇರುವ ಆತಂಕದಿಂದ ಜಾತಕ ಮುಂತಾದ ಪದ್ದತಿಗಳಿಗೆ ಮೊರೆಹೋಗುತ್ತಿದ್ದರು. ಮದುವೆಗೆ ಮೊದಲು ಗಂಡು ಹೆಣ್ಣುಗಳಲ್ಲಿ ಚಿಂತಿಸುವು , ತನ್ನ ವರ ವದುವನ್ನು ಆಯ್ಕೆ ಮಾಡುವ ಪ್ರೌಡತೆ ಇರದ ಕಾರಣಕ್ಕಾಗಿ ಜಾತಕ, ವಂಶ ಮುಂತಾದವುಗಳೆ ಪ್ರಾಮುಖ್ಯ ವಹಿಸಿದ್ದವು.


    ಆದರೆ ಈಗಿನ ಬದಲಾದ ಸಂದರ್ಬಗಳಲ್ಲಿ ಪ್ರೇವ ವಿವಾಹವಾಗಲಿ ಅಥವ ನಿರ್ದರಿಸಿದ ವಿವಾಹವಾಗಲಿ ಸಂವಹನ ಕೊರತೆ, ಮದುವೆಯ ನಂತರದ ದಾಂಪತ್ಯದ ಹೊಣೆಯನ್ನು ಹೊರಲಾರದ ಅಸಹಾಯಕತೆ, ಅಥವ ಅಸಹನೆ ವಿಚ್ಚೇದನಕ್ಕೆ ದಾರಿಯಾಗುತ್ತಿವೆ, ಹಿಂದೆಲ್ಲ ಹಿರಿಯರು ನಡೆಸಿದ್ದ ವಿವಾಹ ನಂತರ ಗಂಡ ಹೆಂಡತಿಯ ನಡುವಿನ ವಿವಾದಗಳು ಹಿರಿಯರ ಮದ್ಯಸ್ಥಿಕೆಯಿಂದಲೆ ಬಗೆಹರಿದು ಮನಸು ಹೊಂದಿಕೊಂಡು ಹೋಗುವ ಮಟ್ಟಕ್ಕೆ ಬರುತ್ತಿತ್ತು. ಈಗಿನ ವಿವಾಹಗಳಲ್ಲಿ ಸ್ವತಂತ್ರ ನಿರ್ದಾರಗಳಿಂದಾಗಿ ವಿವಾಹ ನಂತರ ಗಂಡ ಹೆಂಡತಿ ನಡುವೆ ಸಂವಹನ ಕೊರತೆಗಳುಂಟಾಗುತ್ತವೆ, ಹಿರಿಯರ ಮಾತಿಗೆ ಬೆಲೆಕೊಡುವ ಹೊಂದಿಕೊಳ್ಳುವ ದಿನಗಳೀಗ ಇಲ್ಲ.


   ಅಲ್ಲದೆ ಇಂದಿನ ದಿನಗಳಲ್ಲಿ ಹೆಣ್ಣಿಗೆ ಮದುವೆಯ ನಂತರವು ಹೊರಗಿನ ಪ್ರಪಂಚದ ಸಂಪರ್ಕ ಜಾಸ್ತಿ, ಮೊದಲಿಗಿಂತ ಹಣಕಾಸಿನ ವಿಚಾರದಲ್ಲಿ ಹೆಣ್ಣು ಈಗ ಪ್ರಭಲಳು  ಹಾಗಾಗಿ ಗಂಡಿಗೆ ಹೊಸ ವಾತಾವರಣಾಕ್ಕೆ ಹೊಂದಿಕೊಳ್ಳಲು ಕಷ್ಟವೆನಿಸುತ್ತಿದೆ, ಹಾಗೆಯೆ ಹೆಣ್ಣು ತನಗೆ ಸಾಮಾಜಿಕವಾಗಿ ಇರುವ ಸೌಲಬ್ಯಗಳನ್ನು ದುರಪಯೋಗಪಡಿಸಿಕೊಳ್ಳುತ್ತಿರುವುದು ಸಹ ಸಂಸಾರದಲ್ಲಿನ ಪಲ್ಲಟಗಳಿಗೆ ಕಾರಣವಾಗುತ್ತಿದೆ.


  ಹೀಗಾಗಿ ವದು ವರರಿಗೆ ವಿವಾಹ ಪೂರ್ವ ಸಮಾಲೋಚನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಈ ಮೂಲಕ ಪರಸ್ಕರರಿಗೆ ಸಂಸಾರದಲ್ಲಿ ಅವರ ಕರ್ತವ್ಯ ಹಾಗು ಜವಾಬ್ದಾರಿಗಳನ್ನು ಮನವರಿಕೆ ಮಾಡಿದಲ್ಲಿ ವಿವಾಹನಂತರದ ಘರ್ಷಣೆಗಳು ಕಡಿಮೆಯಾಗುತ್ತದೆ ಮತ್ತು ಆ ಮೂಲಕ ವಿಚ್ಚೇದನಗಳು ಇಳಿಮುಖವಾಗುವ ಬರವಸೆ ಶ್ರೀಮತಿ ಪದ್ಮಶ್ರೀ ಮೂರ್ತಿ ಯವರದು.


ಬಾಷಣಗಳ ವಿಮರ್ಷೆ:


   ಮೊದಲ ಬಾಷಣದ ವಿಮರ್ಷೆ ಶ್ರೀ ಮಂಜುನಾಥರವರಿಂದ :
  ಸುಚೇತನ ಭಟ ರವರ ಬಾಷೆಯಮೇಲಿನ ಹಿಡಿತ ಚೆನ್ನಾಗಿದೆ, ಅವರ ಮಾತು ಸುಲಲಿತವಾಗಿದೆ ಎಂದು ತಿಳಿಸಿದ ಮಂಜುನಾಥರು ಬಾಷಣಕಾರರು ಅದುನಿಕತೆಯ ಪಲ್ಲಟಗಳು ಕೇವಲ ಗ್ರಾಮೀಣ ಜನರಿಗಷ್ಟೆ ಸೀಮಿತವಲ್ಲ ಅದು ನಗರದ ಜನರ ಮೇಲು ಪ್ರಭಾವ ಬೀರಿದೆ ಹಾಗಾಗಿ ಅದನ್ನು ಸೇರಿಸಿದ್ದರೆ ಬಾಷಣ ಪರಿಪೂರ್ಣವಾಗಿರುತ್ತಿತ್ತು ಎಂದರು.


  ಎರಡನೆ ಬಾಷಣದ ವಿಮರ್ಷೆ ಜಯಂತ ರಾಮಚಾರ್ :
   ಶ್ರೀಮತಿ ಪದ್ಮಶ್ರೀ ರವರ ಭಾವನೆಗಳನ್ನು ಅನುಮೋದಿಸಿದ ಜಯಂತ ರವರು ಅವರು ಕಂಡ ಕೆಲ ಉದಾಹರಣೆಗಳನ್ನು ನೀಡಿ , ಬಾಷಣಕಾರರು ಕೊಟ್ಟಿರುವ ಸಮಯದಲ್ಲಿ ಪರಿಣಾಮಕಾರಿಯಾಗಿ ವಿಷಯ ಮಂಡನೆ ಮಾಡಿದ್ದಾರೆ ಎನ್ನುತ್ತ ಇಂದಿನ ಈ ಸಮಸ್ಯೆಗಳಿಗೆಲ್ಲ ಅಹಂಭಾವಗಳ ತಾಕಲಾಟವೆ ಕಾರಣವೆಂದರು.


  ನಂತರ ನಡೆದ ಆಶುಬಾಷಣದ ನಿರ್ವಹಣೆಯನ್ನು ಶ್ರೀ ರಘು ಎಸ್ ಪಿ ರವರು ವಹಿಸಿದರು. ಅವರು ಇಂದಿನ ವಾಕ್ಪಥ ಹೆಜ್ಜೆ ೧೦ ಆರಿಸಿ ಕೊಂಡಿದ್ದ ಆಶುಬಾಷಣದ ವಿಷಯ ಇಂದಿನ ರೈತನ ಬದುಕು ಹಾಗು ಅದು ನಮ್ಮ ಮೇಲೆ ಮಾಡಬಹುದಾದ ಪ್ರಭಾವ ಹಾಗಿ ಸಂಬಂದಿಸಿದಂತೆ ನಮ್ಮ ಅನುಭವ.


 ಪ್ರಭುಮೂರ್ತಿ : ನೇರವಾಗಿ ನನಗೆ ರೈತನ ಬದುಕಿನ ಬಗ್ಗೆ ಅನುಭವವಿಲ್ಲ ಎಂದ ಅವರು ತಾವು ಸಿನಿಮಾ, ಪತ್ರಿಕೆ ಓದಿನ ಮೂಲಕ ಅರಿತಿರುವುದಾಗಿ ತಿಳಿಸಿದರು. ನಂತರ ಅವರು ರೈತನ ಬದುಕು ಸದಾ ರಿಸ್ಕ್ ನಲ್ಲಿರುತ್ತದೆ ಎನ್ನುತ್ತ , ಪಟ್ಟಣದಲ್ಲಿರುವ ಸಣ್ಣ ವ್ಯಾಪರಿಗಳ ಬದುಕು ಸಹ ಅದೆ ರಿಸ್ಕ್ ನಲ್ಲಿರುತ್ತದೆ, ಎಂದು ತಿಳಿಸಿ, ಮಾದ್ಯಮಗಳು ಏಕೊ ಸದಾ ರೈತನಿಕೆ ಕೊಡುವ ಪ್ರಾಮುಖ್ಯ ವ್ಯಾಪರಿಗಳಿಗೆ ಅಥವ ನಗರದ ಕಾರ್ಮಿಕರಿಗೆ ಕೊಡುವದಿಲ್ಲ ಎಂದರು.


 ಪ್ರಸನ್ನ ಕುಲಕರ್ಣಿ: ಅವರು ತಾವು ಸಹ ರೈತನ ಜೀವನದ ನೇರ ಅನುಭವವಿಲ್ಲ ಎಂದು ತಿಳಿಸಿ ಅವರ ಕಷ್ಟಗಳು ಹೇಗೊ ಬಗೆಹರಿದರೆ ಸಾಕು ಎಂದು ಹಾರೈಸಿದರು.


 ಹರೀಶ್ : ಇವರು ತಾವು ಸಹ ರೈತ ಕುಟುಂಬದ ಹಿನ್ನಲೆಯಿಂದ ಬಂದವರೆಂದು ವಿವರಿಸಿ, ರೈತನ ಕಷ್ಟಗಳನ್ನೆಲ್ಲ ಮಾತಿನಲ್ಲಿ ಕಟ್ಟಿ ಇಂದಿನ ರೈತ ಅಹಾರದ ಬೆಳೆಗಿಂತ ವಾಣಿಜ್ಯ ಬೆಳೆಗೆ ನೀಡುತ್ತಿರುವ ಪ್ರಾಶಸ್ತ್ಯದ ಬಗೆಗೆ ಚಿಂತಿಸಿದರು.


ಪಾರ್ಥಸಾರಥಿ :
ಇವರು ರೈತನ ಬಗ್ಗೆ ವಿವರಿಸುತ್ತ. ಪ್ರಭು ಮೂರ್ತಿಯವರ ಮಾತುಗಳನ್ನು ವಿವರಿಸಿ ರೈತನಿಗು ಮತ್ತು ವ್ಯಾಪರಿಗು ಹೋಲಿಸುವುದು ಪ್ರಸ್ತುತ ಸರಿ ಹೊಂದುವದಿಲ್ಲ. ರೈತನ ಸಂಕಷ್ಟಗಳೆ ಬೇರೆ ಎನ್ನುತ್ತ ಮಾತು ಮುಗಿಸಿದರು.


 ನಂತರ ರಘುರರವರು ಆಶುಬಾಷಣದ ಎಲ್ಲ ಬಾಷಣಗಳನ್ನು ಸಮನ್ವಯಗೊಳಿಸುತ್ತ ತಮ್ಮ ಪಾತ್ರ ನಿರ್ವಹಿಸಿದರು.


ನಂತರ ಸಮಯ ಪರಿಪಾಲಕ ಗೋಪಿನಾಥರು ಬಂದು ಬಾಷಣಕಾರರು ಹಾಗು ಆಶುಬಾಷಣದವರು ತೆಗೆದು ಕೊಂಡ ಸಮಯದ ಬಗ್ಗೆ ತಿಳಿಸಿ, ಕೆಂಪು ತೋಸಿಸಿದ ತಕ್ಷಣ ಅನಗತ್ಯವಾಗಿ ಗಾಬರಿಮಾಡಿ ಮಾತು ಮುಗಿಸಬಾರದೆಂದು ತಿಳಿಸಿದರು.


ಬಾಷಬಳಕೆ:  ಶ್ರೀ ಹರೀಶ್ ಆತ್ರೆಯರು ಬಾಷ ಬಳಕೆಯ ಶುದ್ದತೆಯ ಬಗ್ಗೆ ತಿಳಿಸುತ್ತ, ಸುಚೇತನರ ಬಾಷಣ ಸಲಲಿತವಾಗಿತ್ತು ಅಲ್ಲದೆ ಪದಗಳ ಪುನರುಚ್ಚಾರ ಇಲ್ಲವೆ ಇಲ್ಲ ಎನ್ನುವಂತಿದ್ದು ಶುದ್ದವಾಗಿತ್ತೆಂದು ತಿಳಿಸಿದರು.
  ನಂತರ ಶ್ರೀಮತಿ ಪದ್ಮಶ್ರೀ ಯವರ ಬಾಷಣದ ಬಗ್ಗೆ ತಿಳಿಸುತ್ತ ವಾಕ್ಯದಿಂದ ವಾಕ್ಯಕ್ಕೆ ಹೆಚ್ಚು ವಿರಾಮ ಕೊಡುತ್ತ ಇದ್ದಿದ್ದು ಬಾಷಣದ ಲೋಪವೆಂದೆ ತಿಳಿಸಿದ ಇವರು ಆದರೆ ಶ್ರೀಮತಿ ಪದ್ಮಶ್ರೀಯವರ ಬಾಷಣದಲ್ಲಿನ ಪದಗಳ ಉಚ್ಚರ ಸ್ವಷ್ಟವಾಗಿದ್ದು 'ಅ' ಕಾರ 'ಹ' ಕಾರ ಲೋಪಗಳಂತ ಯಾವುದೆ ಲೋಪವಿರದೆ ಶುದ್ದವಾಗಿತ್ತೆಂದು ತಿಳಿಸಿದರು.


ನಂತರ ವಾಕ್ಪಥ ಕ್ಕೆ ಹೊಸ ಆಗಮನವಾದ ರಮೇಶ್ ರವರು ಮಾತನಾಡಿ ತಮಗೆ ಗೋಷ್ಠಿ  ಸಂತಸ ತಂದಿತೆಂದು ತಿಳಿಸಿ ಭಾವನೆಗಳ ಮನಸಿನ ಸ್ಥಾಯಿಯ ಮೇಲೆ ನಿರ್ದರವಾಗುವದೆಂದು ತಿಳಿಸಿದರು.


 ನಂತರ ಗೋಷ್ತಿಗೆ ಮಂಗಳ ಹಾಡುತ್ತ ಮಾತನಾಡಿದ ನಿರ್ವಾಹಕ ಸುನಿಲ್ ದಾಸಪ್ಪನವರು ಗೋಷ್ಠಿಯ ಯಶಸ್ಸು ತಮಗೆ ಸಂತಸ ತೃಪ್ತಿ ತಂದಿದೆ ಎಂದರು. ಬಾಷಣದ ವಿಷಯಗಳು ಅವಗಳಲ್ಲಿನ ವೈವಿದ್ಯತೆ ವಿವರಿಸುತ್ತ ಖುಷಿ ಬಿದ್ದರು. ಅಲ್ಲದೆ ಆಶುಬಾಷಣದ ವಿಷಯ ತಮಗೆ ಸಂತಸ ತಂದಿದೆ ಎಂದ ಅವರು , ತಮ್ಮ  ನೇತೃತ್ವದಲ್ಲಿನ ಗೋಷ್ತಿ ಪರಿಪೂರ್ಣ ಯಶಸ್ಸು ಕಂಡಿತೆಂದು ತಿಳಿಸಿದರು.


 ಮುಂದಿನ   ಗೋಷ್ಠಿಯ ನಿರ್ವಹಣೆಯನ್ನು  ಶ್ರೀ ಪ್ರಸನ್ನ ಕಲಕರ್ಣಿಯವರು ವಹಿಸಿಕೊಂಡರು


 ಗೋಷ್ಥಿಯ  ವರದಿ : ಪಾರ್ಥಸಾರಥಿ ಎನ್

1 comment:

  1. ಮ ವೆಂ. ರಮೇಶ ಜೋಯಿಸ್11 December 2011 at 6:21 pm

    ಮಾನ್ಯರೇ,
    ವಾಕ್ಪಥದ 10 ನೇ ಹೆಜ್ಜೆಯಲ್ಲಿ ನನ್ನ ಮೊದಲ ಹೆಜ್ಜೆ ಜೊತೆಯಾಗಿಸಿದ್ದೇನೆ. ಅವಕಾಶ ಮಾಡಿಕೊಟ್ಟ ಎಲ್ಲರಿಗೂ ವಂದನೆಗಳು.
    ಶ್ರೀ ಪಾರ್ಥಸಾರಥಿಯವರ ವರದಿ ಓದಿದೆ.ಅದರಲ್ಲಿ ನಾನು ಮಾತನಾಡಿದ್ದನ್ನು ವರದಿ ಮಾಡಿದ್ದಾರೆ ಅದು ಈ ರೀತಿ ಇದೆ.."ನಂತರ ವಾಕ್ಪಥ ಕ್ಕೆ ಹೊಸ ಆಗಮನವಾದ ರಮೇಶ್ ರವರು ಮಾತನಾಡಿ ತಮಗೆ ಗೋಷ್ಠಿ ಸಂತಸ ತಂದಿತೆಂದು ತಿಳಿಸಿ ಭಾವನೆಗಳ ಮನಸಿನ ಸ್ಥಾಯಿಯ ಮೇಲೆ ನಿರ್ದರವಾಗುವದೆಂದು ತಿಳಿಸಿದರು." ಈ ಸಂದರ್ಭದಲ್ಲಿ ನಾನು ಆಡಿದ ಮಾತು "ಸಾಮಾಜಿಕ ಸಮಾನತೆಗೆ ಸ್ಥಾಯೀ ಆಧಾರ ಮನಸ್ಸೇ.....ಆದ್ದರಿಂದ ಮನಸ್ಸಿನ ಭಾವನೆಗಳ ಮೇಲೆ ಸಮಾನತೆಯ ನಿರ್ಧಾರ"ವೆಂದು ತಿಳಿಸ ಬಯಸುತ್ತೇನೆ.
    ವಂದನೆಗಳು,
    ಮ.ವೆಂ. ರಮೇಶ ಜೋಯಿಸ್.

    ReplyDelete